Sunday, June 7, 2026
HomeUncategorizedನಟಿ ಶ್ರಾವಣಿ ಆತ್ಮಹತ್ಯೆ ಪ್ರಕರಣಕ್ಕೆ ಸಿಕ್ಕಹೊಸ ತಿರುವು: ನಿರ್ಮಾಪಕರೊಟ್ಟಿಗೆ ಮಾತನಾಡಿದ್ದ ಆಡಿಯೋ ಬಹಿರಂಗ!

ನಟಿ ಶ್ರಾವಣಿ ಆತ್ಮಹತ್ಯೆ ಪ್ರಕರಣಕ್ಕೆ ಸಿಕ್ಕಹೊಸ ತಿರುವು: ನಿರ್ಮಾಪಕರೊಟ್ಟಿಗೆ ಮಾತನಾಡಿದ್ದ ಆಡಿಯೋ ಬಹಿರಂಗ!

- Advertisement -
- Advertisement -

ಹೈದರಾಬಾದ್: ಟಿವಿ ಧಾರಾವಾಹಿ ಮತ್ತು ಸಿನಿಮಾ ನಟಿ ಶ್ರಾವಣಿ ಕೊಂಡಪಲ್ಲಿ (26) ಅವರ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ನಿರ್ಮಾಪಕರೊಬ್ಬರೊಂದಿಗೆ ಅವರು ಸಂಬಂಧ ಇಟ್ಟುಕೊಂಡಿದ್ದರು ಎಂದು ತಿಳಿದು ಬಂದಿದೆ.

ಶ್ರಾವಣಿ ಮತ್ತು ಯಶಸ್ವಿ “ಆರ್​ಎಕ್ಸ್​ 100” ಚಿತ್ರದ ನಿರ್ಮಾಪಕ ಅಶೋಕ್ ರೆಡ್ಡಿ ನಡುವೆ ಸಂಬಂಧ ಇತ್ತು ಎಂಬ ವಿಷಯ ಬಹಿರಂಗವಾಗಿದೆ. ಇವರಿಬ್ಬರ ನಡುವೆ ನಡೆದ ಫೋನ್ ಕಾಲ್ ಸಂಭಾಷಣೆಯ ಆಡಿಯೋ ಕ್ಲಿಪ್ ಸದ್ಯ ಸಿಕ್ಕಿದೆ ಎನ್ನಲಾಗಿದೆ.

ದೇವರಾಜ್ ನನಗೆ ಕಿರುಕುಳ ನೀಡುತ್ತಿದ್ದು, ನಮ್ಮ ಬಣ್ಣ ಬಯಲು ಮಾಡುತ್ತೇನೆ ಎನ್ನುತ್ತಿದ್ದಾನೆ. ನಾವಿಬ್ಬರು ಒಟ್ಟಿಗೆ ಇರುವುದನ್ನು ಆತ ನೋಡಿದ್ದಾನಂತೆ ಎಂದು ಶ್ರಾವಣಿ ರೆಡ್ಡಿಗೆ ಹೇಳಿರುವ ಆಡಿಯೋ ಸದ್ಯ ಸಿಕ್ಕಿದೆ.

ಮಾನಸು ಮಮತಾ ಮತ್ತು ಮೌನರಾಗಂ ಸೇರಿದಂತೆ ಹಲವು ಧಾರವಾಹಿಗಳಲ್ಲಿ ಶ್ರಾವಣಿ ನಟೆಸಿದ್ದರು. ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರು ಟಿಕ್ ಟಾಕ್ ನಲ್ಲಿ ಪರಿಚಯವಾಗಿದ್ದ ದೇವರಾಜ್ ಎಂಬ ವ್ಯಕ್ತಿ ನೀಡಿದ್ದ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರು ಆ ವ್ಯಕ್ತಿಯ ಹುಡುಕಾಟದಲ್ಲಿದ್ದಾರೆ.

- Advertisement -

Latest News

error: Content is protected !!