ವಿಟ್ಲ; ದಿನಾಂಕ: 12-04-2026 ರಂದು ವಿಟ್ಲ ಠಾಣಾ ವ್ಯಾಪ್ತಿಯ ಕೋಡಪದವು ಎಂಬಲ್ಲಿ ಮಗುವೊಂದರ (7 ವರ್ಷ) ಕುತ್ತಿಗೆಯಲ್ಲಿದ್ದ ಸುಮಾರು 7 ಗ್ರಾಂ ತೂಕದ ಚಿನ್ನದ ಸರವನ್ನು, ದ್ವಿಚಕ್ರ ವಾಹನ (ಕೆ.ಟಿ.ಎಂ ಬೈಕ್) ದಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ಮಗುವನ್ನು ಬೆದರಿಸಿ ಎಳೆದುಕೊಂಡು ಹೋಗಿರುವ ಬಗ್ಗೆ ಈಗಾಗಲೇ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ಆರೋಪಿ ಎಂಬುದಾಗಿ ಕೆ.ಟಿ.ಎಂ ಬೈಕ್ ಸವಾರನೊಬ್ಬನ ಭಾವಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದು, ಈ ಬಗ್ಗೆ ವಿಟ್ಲ ಠಾಣಾ ಪೊಲೀಸರು ಸದ್ಯ ಬೈಕ್ ಸವಾರನನ್ನು ವಿಚಾರಣೆ ನಡೆಸಿದ್ದು, ಈತನಿಗೂ, ಮಗುವಿನ ಚಿನ್ನದ ಸರ ಎಳೆದುಕೊಂಡು ಹೋಗಿರುವ ಘಟನೆಗೂ ಸಂಬಂಧವಿರುವುದಿಲ್ಲ ಎಂಬುದಾಗಿ ವಿಚಾರಣೆಯಲ್ಲಿ ತಿಳಿದುಬಂದಿರುತ್ತದೆ. ಈ ಬೈಕ್ ಸವಾರನ ಬಗ್ಗೆ ಯಾವುದೇ ನಕರಾತ್ಮಕ ಅಭಿಪ್ರಾಯಗಳು ಉಂಟಾಗಬಾರದು ಎಂಬ ದೃಷ್ಟಿಯಿಂದ ಆತನ ಕುಟುಂಬದವರ ಕೋರಿಕೆಯ ಮೇರೆಗೆ ಈ ಸ್ಪಷ್ಟೀಕರಣವನ್ನು ನೀಡಲಾಗಿದ್ದು, ಪ್ರಕರಣದ ಆರೋಪಿಯ ಪತ್ತೆಕಾರ್ಯ ಪ್ರಗತಿಯಲ್ಲಿದೆ.


