- Advertisement -
![]()
- Advertisement -
ವಿಟ್ಲ; ಮನೆಯ ಆವರಣದಲ್ಲಿ ಸ್ಫೋಟಕದಂತಹ ಸಂಶಯಾಸ್ಪದ ವಸ್ತು ಪತ್ತೆಯಾದ ಹಿನ್ನೆಲೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ವಿಟ್ಲ ಕಂಬಳಬೆಟ್ಟು ಬಳಿಯ ಅಮೈ ಎಂಬಲ್ಲಿ ನಡೆದಿದೆ. ಜಗದೀಶ ಪೂಜಾರಿ ಬಂಧಿತ ಆರೋಪಿ.
ದಿನಾಂಕ 13-04-2026 ರಂದು ರಾತ್ರಿ, ಜಗದೀಶರವರು ಅವರ ಮನೆಯ ಆವರಣದಲ್ಲಿ ಯಾವುದೇ ಮುನ್ನೆಚ್ಚರಿಕೆ ವಹಿಸದೇ ಶೇಖರಿಸಿರುತ್ತಾರೆ ಎಂಬುದಾಗಿ ಮಾಹಿತಿ ಬಂದ ಮೇರೆಗೆ, ವಿಟ್ಲ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಬಿ ಎಸ್ ನಾಯಕರವರು ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಸುಮಾರು 1.9 ಕೆ.ಜಿ ಯಷ್ಟು ಸ್ಪೋಟಕದಂತಹ ಸಂಶಯಾಸ್ಪದ ವಸ್ತು ಪತ್ತೆಯಾಗಿರುತ್ತದೆ. ಈ ಬಗ್ಗೆ ಮುಂದಿನ ಕಾನೂನುಕ್ರಮಕ್ಕಾಗಿ ಆರೋಪಿಯನ್ನು ವಶಕ್ಕೆ ಪಡೆದು, ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
- Advertisement -


