- Advertisement -
- Advertisement -
ಬಂಟ್ವಾಳ: ಅಡಿಕೆ ತೆಂಗು ರಬ್ಬರ್ ದಾಸ್ತಾನು ಕೇಂದ್ರ ವೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಲಕ್ಷಾಂತರ ರೂ ನಷ್ಟ ಸಂಭವಿಸಿದ ಘಟನೆ ರಾತ್ರಿ ನಡೆದಿದೆ.
ಬಂಟ್ವಾಳ ತಾಲೂಕಿನ ವಿಟ್ಲ ಮೂಡ್ನೂರು ಗ್ರಾಮದ ಅಕ್ಷಯ ಕುಕ್ಕುಮೂಲೆ ನಿವಾಸಿ ಗೋವಿಂದ ಭಟ್ ಅವರ ಅಡಿಕೆ ತೆಂಗು, ಮತ್ತು ರಬ್ಬರ್ ದಾಸ್ತಾನು ಕೊಠಡಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸುಮಾರು ನಾಲ್ಕು ಲಕ್ಷ ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಪುತ್ತೂರು ಅಗ್ನಿಶಾಮಕ ದಳದವರು ಅಗಮಿಸಿ ಬೆಂಕಿ ನಂದಿಸಿದ್ದಾರೆ.
- Advertisement -