Wednesday, June 3, 2026
Homeಕ್ರೀಡೆಪ್ಯಾರಾಲಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ: ಕಂಚಿನ ಪದಕ ಗೆದ್ದ ವಿನೋದ್ ಕುಮಾರ್!

ಪ್ಯಾರಾಲಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ: ಕಂಚಿನ ಪದಕ ಗೆದ್ದ ವಿನೋದ್ ಕುಮಾರ್!

- Advertisement -
- Advertisement -

ಟೋಕಿಯೊ ಪ್ಯಾರಾಲಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಬಂದಿದೆ. ಪುರುಷರ ಡಿಸ್ಕಸ್ ಥ್ರೋ ಎಫ್ 52ನಲ್ಲಿ ವಿನೋದ್ ಕುಮಾರ್ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಒಂದೇ ದಿನ ಭಾರತ 3 ಪದಕಗಳನ್ನು ಬಾಚಿಕೊಂಡು ದಾಖಲೆ ಬರೆದಿದೆ.

ಡಿಸ್ಕಸ್ ಥ್ರೋನಲ್ಲಿ ವಿನೋದ್ ಕುಮಾರ್ 19.91 ಮೀಟರ್ ಅತ್ಯುತ್ತಮ ಪ್ರಯತ್ನದೊಂದಿಗೆ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ವಿನೋದ್ ಕುಮಾರ್ ಏಷ್ಯನ್ ದಾಖಲೆಯನ್ನು ಮುರಿದರು.

ಭಾರತೀಯ ಯೋಧನಾಗಿರುವ ವಿನೋದ್ ಕುಮಾರ್ ಅಪಘಾತವೊಂದರಲ್ಲಿ ಪಾರ್ಶ್ವವಾಯು ಪೀಡಿತರಾಗಿ ಸುಮಾರು ಒಂದು ದಶಕದ ಕಾಲ ಹಾಸಿಗೆ ಹಿಡಿದಿದ್ದರು. ಆದರೆ 2016ರ ರಿಯೊ ಒಲಿಂಪಿಕ್ಸ್ ನಿಂದ ಸ್ಫೂರ್ತಿ ಪಡೆದು ಸತತ ಅಭ್ಯಾಸ ನಡೆಸಿದ್ದೂ ಅಲ್ಲದೇ ಮೊದಲ ಪ್ರಯತ್ನದಲ್ಲಿ ಕಂಚಿನ ಪದಕ ಗೆದ್ದು ಸ್ಫೂರ್ತಿಯಾಗಿದ್ದಾರೆ.

ಪ್ಯಾರಾಲಿಂಪಿಕ್ಸ್ ನ 5ನೇ ದಿನವಾದ ಭಾನುವಾರ ಭಾರತ 3 ಪದಕ ಗೆದ್ದುಕೊಂಡಿದ್ದು, 2016ರ ರಿಯೋ ಒಲಿಂಪಿಕ್ಸ್ ನಲ್ಲಿ 4 ಪದಕದ ದಾಖಲೆ ಸರಿಗಟ್ಟಲು ಕೇವಲ ಒಂದು ಪದಕ ಬೇಕಿದೆ. ಇದಕ್ಕೂ ಮುನ್ನ ಟೇಬಲ್ ಟೆನಿಸ್ ನಲ್ಲಿ ಭಾವಿಯಾ ಪಟೇಲ್ ಮತ್ತು ಹೈ ಜಂಪ್ ನಲ್ಲಿ ನಿಶಾದ್ ಕುಮಾರ್ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.

- Advertisement -

Latest News

error: Content is protected !!