Monday, May 6, 2024
Homeಕರಾವಳಿಮಂಗಳೂರು: ಹಿರಿಯ ಟ್ರಾಫಿಕ್ ವಾರ್ಡನ್ ಜೋಸೆಫ್ ಗೊನ್ಸಾಲ್ವಿಸ್ ನಿಧನ

ಮಂಗಳೂರು: ಹಿರಿಯ ಟ್ರಾಫಿಕ್ ವಾರ್ಡನ್ ಜೋಸೆಫ್ ಗೊನ್ಸಾಲ್ವಿಸ್ ನಿಧನ

spot_img
- Advertisement -
- Advertisement -

ಮಂಗಳೂರು: ನಗರದ ಹಿರಿಯ ಟ್ರಾಫಿಕ್ ವಾರ್ಡನ್ ಆಗಿದ್ದ 99 ವರ್ಷದ ಜೋಸೆಫ್ ಗೊನ್ಸಾಲ್ವಿಸ್ ಎಂಬುವವರು ಇಂದು ನಿಧನರಾಗಿದ್ದಾರೆ.

ನಗರದ ಫಳ್ನೀರ್ ನಿವಾಸಿಯಾಗಿದ್ದ ಅವರು ನಗರದಲ್ಲಿ ಸಮಾಜ ಸೇವೆಯ ಮೂಲಕ ಅದರಲ್ಲೂ ಟ್ರಾಫಿಕ್ ವಾರ್ಡನ್ ಆಗಿ ಜನಮೆಚ್ಚುಗೆ ಪಡೆದಿದ್ದರು. 1921ರ ಜ.1ರಂದು ಜನಿಸಿದ್ದ ಅವರು ಬ್ರಿಟಿಷ್ ಕಂಪೆನಿಯ ಉದ್ಯೋಗಿಯಾಗಿದ್ದರು. ಬಳಿಕ ಆ ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಗಮನ ಸೆಳೆದಿದ್ದರು.

ನಿವೃತ್ತಿಯ ನಂತರ ಸಮಾಜಕ್ಕೆ ಸೇವೆ ಮಾಡುವ ಉದ್ದೇಶದಿಂದ ಗೊನ್ಸಾಲ್ವಿಸ್ ಟ್ರಾಫಿಕ್ ವಾರ್ಡನ್ ಆಗಲು ನಿರ್ಧರಿಸಿದ್ದರು. 2015 ರಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಟ್ರಾಫಿಕ್ ವಾರ್ಡನ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಾಗ ಅವರಿಗೆ 94 ವರ್ಷ ವಯಸ್ಸಾಗಿತ್ತು. ಈ ಅವಧಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಮತ್ತು ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿದ್ದರು.

ನಗು ಮುಖದೊಂದಿಗೆ ಜೋ ಅವರು ಮಂಗಳೂರಿನ ಹಾಟ್‌ ಸ್ಪಾಟ್‌ಗಳಲ್ಲಿ ಟ್ರಾಫಿಕ್ ನಿರ್ವಹಿಸುತ್ತಿದ್ದರು. ಸುರಕ್ಷಿತ ಚಾಲನೆ ಮತ್ತು ಇತರ ಪ್ರಮುಖ ವಿಷಯಗಳ ಕುರಿತು ಅವರು ಆಗಾಗ್ಗೆ ಯುವಜನರೊಂದಿಗೆ ಸಂವಾದ ನಡೆಸುತ್ತಿದ್ದರು. 2019 ರಲ್ಲಿ ಟ್ರಾಫಿಕ್ ನಿರ್ವಹಣೆಯಲ್ಲಿ ಶ್ಲಾಘನೀಯ ಕೆಲಸ ಮಾಡಿದ್ದಕ್ಕಾಗಿ ನಗರ ಪೊಲೀಸರು ಅವರನ್ನು ಗೌರವಿಸಿದ್ದರು.

- Advertisement -
spot_img

Latest News

error: Content is protected !!