ಪ್ಯಾರೀಸ್ ಒಲಿಂಪಿಕ್ಸ್ ನಲ್ಲಿ 50 ಕೆಜಿ ಮಹಿಳೆಯರ ಕುಸ್ತಿ ವಿಭಾಗದಲ್ಲಿ ಫೈನಲ್ ಪ್ರವೇಶ ಮಾಡಿದ್ದ ವಿನೇಶ್ ಪೋಗಟ್ ಪದಕ ತರುತ್ತಾರೆ ಅಂತಾ ಕೋಟ್ಯಂತರ ಭಾರತೀಯರು ಆಸೆಕಂಗಳಿಂದ ಕಾಯುತ್ತಿದ್ದರು. ಆದರೆ ಅವರೆಲ್ಲರ ನಿರೀಕ್ಷೆ ಹುಸಿಯಾಗಿತ್ತು.ನಿಗದಿತ ತೂಕಕ್ಕಿಂತ ಜಸ್ಟ್ 100 ಗ್ರಾಂ ತೂಕ ಜಾಸ್ತಿಯಿದ್ದಾರೆ ಅನ್ನೋ ಕಾರಣಕ್ಕೆ ಒಲಿಂಪಿಕ್ಸ್ ಸಂಘಟಕರು ಅವರನ್ನು ಅನರ್ಹಗೊಳಿಸಿದರು.

ಅದರ ಬೆನ್ನಲ್ಲೇ ಅವರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೀಗ ಬೆಳ್ಳಂಬೆಳಗ್ಗೆ ಆಸ್ಪತ್ರೆಯಿಂದಲೇ ಕೋಟ್ಯಂತರ ಭಾರತೀಯರಿಗೆ ಶಾಕಿಂಗ್ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಕುಸ್ತಿಗೆ ವಿದಾಯ ಘೋಷಿಸಿ ವಿನೇಶ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದಾರೆ. ಕುಸ್ತಿ ನನ್ನ ವಿರುದ್ಧ ಪಂದ್ಯವನ್ನು ಗೆದ್ದಿತು, ನಾನು ಸೋತೆ… ನಿಮ್ಮ ಕನಸುಗಳು ಮತ್ತು ನನ್ನ ಧೈರ್ಯ ಛಿದ್ರವಾಗಿದೆ. ನನಗೆ ಈಗ ಹೆಚ್ಚಿನ ಶಕ್ತಿ ಇಲ್ಲ.ಗುಡ್ ಬೈ ಕುಸ್ತಿ 2001-2024. ನಿಮ್ಮೆಲ್ಲರಿಗೂ ನಾನು ಎಂದೆಂದಿಗೂ ಋಣಿಯಾಗಿರುತ್ತೇನೆ. ಕ್ಷಮಿಸಿ” ಎಂದು ಅವರು ಬರೆದುಕೊಂಡಿದ್ದಾರೆ.
ಇವರ ಪೋಸ್ಟ್ ನೋಡಿ ಕೋಟ್ಯಂತರ ಕ್ರೀಡಾಪ್ರೇಮಿಗಳು ಬೇಸರ ಹೊರ ಹಾಕಿದ್ದಾರೆ. ವಿನೇಶ್ ಗೆ ಅನ್ಯಾಯವಾಗಿದೆ ಎಂದು ಭಾವುಕರಾಗಿದ್ದಾರೆ.


