Friday, June 5, 2026
Homeಕರಾವಳಿಮಂಗಳೂರುಮಂಗಳೂರು; ಉಳ್ಳಾಲದಲ್ಲಿ ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆ

ಮಂಗಳೂರು; ಉಳ್ಳಾಲದಲ್ಲಿ ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆ

- Advertisement -
- Advertisement -

ಮಂಗಳೂರು; ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆಯಾಗಿರುವ ಘಟನೆ ಉಳ್ಳಾಲದ ಉಳ್ಳಾಲ ತೊಕ್ಕೊಟ್ಟಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ನಡೆದಿದೆ.

ಇಲ್ಲಿನ ಸ್ಕೈ ಹೈಟ್ಸ್‌ ಅಪಾರ್ಟ್‌ಮೆಂಟ್‌ ನಲ್ಲಿ ವಾಸವಾಗಿದ್ದ  ಮಂಜುಳಾ (31) ಅವರು ತನ್ನ ಮಕ್ಕಳಾದ ಕೃಷ್ಣ (8) ಹಾಗೂ ಖುಷಿ (6) ಎಂಬವರೊಂದಿಗೆ ನಾಪತ್ತೆಯಾಗಿದ್ದಾರೆ.

 ಮಂಜುಳಾ ಅವರು ಜು. 29ರಂದು ಬೆಳಗ್ಗೆ 10 ಗಂಟೆಗೆ ಫ್ಲ್ಯಾಟ್‌ನಿಂದ ಹೊರಟಿದ್ದು, ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಹೋಗಿದ್ದಾರೆ.ಆ ಬಳಿಕ ಅವರ ಸುಳಿವು ಲಭ್ಯವಾಗಿಲ್ಲ. ಈ ಬಗ್ಗೆ ಅವರ ಪತಿ ದ್ಯಾಮಣ್ಣ ಮೇಟಿ ಅವರು ಆ. 3ರಂದು ಉಳ್ಳಾಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಅವರು ಪತ್ತೆಯಾದಲ್ಲಿ ಉಳ್ಳಾಲ ಪೊಲೀಸ್‌ ಠಾಣೆಯನ್ನು (0824-2466269) ಸಂಪರ್ಕಿಸಲು ಕೋರಲಾಗಿದೆ.

- Advertisement -

Latest News

error: Content is protected !!