Wednesday, June 3, 2026
Homeಕರಾವಳಿಸೀಯಾಳ ಕೊಯ್ಯುವ ವೇಳೆ ವಿದ್ಯುತ್‌ ತಂತಿ ತಗುಲಿ ವ್ಯಕ್ತಿ ಸಾವು

ಸೀಯಾಳ ಕೊಯ್ಯುವ ವೇಳೆ ವಿದ್ಯುತ್‌ ತಂತಿ ತಗುಲಿ ವ್ಯಕ್ತಿ ಸಾವು

- Advertisement -
- Advertisement -

ಶಿರ್ವ: ಇಲ್ಲಿನ ವ್ಯಕ್ತಿಯೋರ್ವರು ಸೀಯಾಳ ಕೊಯ್ಯುವ ವೇಳೆ ವಿದ್ಯುತ್‌ ತಂತಿ ತಗುಲಿ ಮೃತಪಟ್ಟ ಘಟನೆ ಇಲ್ಲಿನ ನಡೀಬೆಟ್ಟು ಎಂಬಲ್ಲಿ ಆ.8ರ ಗುರುವಾರ ಬೆಳಿಗ್ಗೆ ಸಂಭವಿಸಿದೆ.

ಮೃತಪಟ್ಟ ವ್ಯಕ್ತಿ ಶಿರ್ವ ನಡೀಬೆಟ್ಟು ಪನಿಮಾರ್‌ ಮನೆಯ ಕೆಲಸದಾಳು ಸುರೇಶ್‌ ಶೆಟ್ಟಿ(68) ಎಂದು ತಿಳಿದು ಬಂದಿದೆ.  

ಸುರೇಶ್‌ ತಾನು ಕೆಲಸಮಾಡುತ್ತಿರುವ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಬ್ಬಿಣದ ಸಲಕೆಯಿಂದ ಸೀಯಾಳ ತೆಗೆಯಲು ಹೋಗಿದ್ದು, ಈ ಸಂದರ್ಭದಲ್ಲಿ ತೋಟದಲ್ಲಿರುವ ಹೈ ಟೆನ್ಷನ್‌ ವಯರ್‌ ತಗಲಿ ಈ ಅವಘಡ ಸಂಭವಿಸಿರುತ್ತದೆ.

ಮನೆಯ ಯಜಮಾನ ದೇವಸ್ಥಾನಕ್ಕೆ ಹೋಗಿದ್ದ ಸಂದರ್ಭದಲ್ಲಿ ಈ ಅನಾಹುತ ಸಂಭವಿಸಿದೆ. ಘಟನೆಯ ಕುರಿತ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

- Advertisement -

Latest News

error: Content is protected !!