Wednesday, June 3, 2026
Homeಪ್ರಮುಖ-ಸುದ್ದಿನಿನ್ನೆ ಅರೆಸ್ಟ್ ಆಗಿದ್ದ ಮಾಜಿ ಬಿಗ್ ಬಾಸ್ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ...

ನಿನ್ನೆ ಅರೆಸ್ಟ್ ಆಗಿದ್ದ ಮಾಜಿ ಬಿಗ್ ಬಾಸ್ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ರಿಲೀಸ್

- Advertisement -
- Advertisement -

ಬೆಂಗಳೂರು; ಕೈಯಲ್ಲಿ ಲಾಂಗ್ ಹಿಡಿದು ರೀಲ್ಸ್ ಮಾಡಿದ ಕಾರಣಕ್ಕಾಗಿ ಅರೆಸ್ಟ್ ಆಗಿದ್ದ ಮಾಜಿ ಬಿಗ್ ಬಾಸ್ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಅವರನ್ನು ಪೊಲೀಸರು ನಿನ್ನೆ ಮಧ್ಯರಾತ್ರಿ ರಿಲೀಸ್ ಆಗಿದ್ದಾರೆ.

ಇಬ್ಬರೂ ಲಾಂಗ್‌ ಹಿಡಿದು ರೀಲ್ಸ್‌ ಮಾಡಿದ್ದರು. ಸಿನಿಮೀಯ ಶೈಲಿಯಲ್ಲಿ ವೀಡಿಯೋ ಮಾಡಿ ಪೋಸ್ಟ್‌ ಮಾಡಿದ್ದರು. ಬಸವೇಶ್ವರ ನಗರ ಪೊಲೀಸರು ಇಬ್ಬರಿಗೂ ನೋಟಿಸ್‌ ನೀಡಿ ವಿಚಾರಣೆಗೆ ಬರುವಂತೆ ಸೂಚಿಸಿದ್ದರು. ಬಳಿಕ ಇಬ್ಬರನ್ನೂ ಬಂಧನಕ್ಕೆ ಒಳಪಡಿಸಲಾಗಿತ್ತು. ನಿನ್ನೆ ಮಧ್ಯಾಹ್ನ ಬಂಧಿಸಿ, ಮಧ್ಯರಾತ್ರಿ ಬಿಡುಗಡೆ ಮಾಡಿರುವುದು ಪ್ರಶ್ನೆ ಹುಟ್ಟುಹಾಕಿದೆ. ಬಂಧನ ಮಾಡಿದ ಬಳಿಕ ಸ್ಟೇಷನ್ ಬೇಲ್ ಕೊಡಬೇಕು‌, ಇಲ್ಲದೇ ಹೋದರೆ ಕೋರ್ಟ್ ಬೇಲ್ ಆಗಬೇಕು.‌ ತಡರಾತ್ರಿ ನೋಟಿಸ್ ಕೊಟ್ಟು ಆರೋಪಿಗಳಾದ ವಿನಯ್, ರಜತ್‌ನನ್ನ ಪೊಲೀಸರು ಕಳುಹಿಸಿದ್ದಾರೆ. ಆರೋಪಿಗಳಿಗೆ ಪೊಲೀಸರೇ ಶರಣಾದರೆ ಎಂಬ ಮಾತು ಕೇಳಿಬರುತ್ತಿದೆ.

ಶಸ್ತ್ರಾಸ್ತ್ರ ಕಾಯ್ದೆಯಡಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದರು. ಆದರೆ, ತಾವು ರೀಲ್ಸ್‌ಗೆ ಬಳಸಿರುವುದು ಫೈಬರ್‌ ಮಚ್ಚು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ರೀಲ್ಸ್‌ನಲ್ಲಿ ಬಳಸಿದ್ದ ಮಚ್ಚನ್ನು ಆರೋಪಿಗಳು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳ ಮಾತನ್ನೇ ನಂಬಿ ಫೈಬರ್ ಮಚ್ಚು ಎನ್ನುವ ನಿರ್ಧಾರಕ್ಕೆ ಪೊಲೀಸರು ಬಂದಿದ್ದಾರೆ.

- Advertisement -

Latest News

error: Content is protected !!