Thursday, June 4, 2026
Homeಕರಾವಳಿಸುಳ್ಯ: ಮದ್ಯದಂಗಡಿಗೆ ಬಂದ್‌ ಮಾಡಿಸುವಂತೆ ಕುರ್ಚಿ, ನಾಮಫಲಕ ಕಿತ್ತೆಸೆದು ಪ್ರತಿಭಟನಾಕಾರರ ಆಕ್ರೋಶ

ಸುಳ್ಯ: ಮದ್ಯದಂಗಡಿಗೆ ಬಂದ್‌ ಮಾಡಿಸುವಂತೆ ಕುರ್ಚಿ, ನಾಮಫಲಕ ಕಿತ್ತೆಸೆದು ಪ್ರತಿಭಟನಾಕಾರರ ಆಕ್ರೋಶ

- Advertisement -
- Advertisement -

ಸುಳ್ಯ: ಒಮ್ಮೆಲೆ ತೆರೆದ ಮದ್ಯದಂಗಡಿಯನ್ನು ಬಂದ್‌ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಭಾರೀ ಪ್ರತಿಭಟನೆ ನಡೆಸಿದ ಪರಿಣಾಮ ಪರಿಸ್ಥಿತಿ ಕೈಮೀರಿದ ಘಟನೆ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕದಲ್ಲಿ ನಡೆದಿದೆ.

ಮದ್ಯದಂಗಡಿಯಲ್ಲಿದ್ದ ಕುರ್ಚಿ, ನಾಮಫಲಕಗಳನ್ನು ಕಿತ್ತೆಸೆದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ರು. ಅಲ್ಲದೇ ಈ ವೇಳೆ ಪ್ರತಿಭಟನಾಕಾರರು ಹಾಗೂ ಮದ್ಯದಂಗಡಿ ಪರ ಇದ್ದವರ ನಡುವೆ ಜಟಾಪಟಿಯೂ ನಡೆದಿದೆ. ನಂತರ ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ಹತೋಟಿಗೆ ಬಂದಿದೆ. ಸದ್ಯ ಸಚಿವ ಎಸ್. ಅಂಗಾರ ಸೂಚನೆಯಂತೆ ಮದ್ಯದಂಗಡಿ ತಾತ್ಕಾಲಿಕ ಬಂದ್ ಆಗಿದೆ. ಮತ್ತೆ ತೆರೆದಲ್ಲಿ ಎಲ್ಲಾ ಅನಾಹುತಗಳಿಗೂ ಜಿಲ್ಲಾಡಳಿತವೇ ಹೊಣೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

- Advertisement -

Latest News

error: Content is protected !!