Saturday, June 6, 2026
Homeಕರಾವಳಿಉಡುಪಿಉಡುಪಿ : ನಕ್ಸಲ್ ನಾಯಕ ವಿಕ್ರಂ ಗೌಡ ಎನ್ ಕೌಂಟರ್ ಪ್ರಕರಣ: ಮೂರು ಗುಂಡಿನಿಂದ ಸಾವನ್ನಪ್ಪಿದ...

ಉಡುಪಿ : ನಕ್ಸಲ್ ನಾಯಕ ವಿಕ್ರಂ ಗೌಡ ಎನ್ ಕೌಂಟರ್ ಪ್ರಕರಣ: ಮೂರು ಗುಂಡಿನಿಂದ ಸಾವನ್ನಪ್ಪಿದ ವಿಕ್ರಂ ಗೌಡ :ಆತನ ಬಳಿಯಿದ್ದ ನಾಡ ಬಂದೂಕು ವಶಕ್ಕೆ

- Advertisement -
- Advertisement -

ಉಡುಪಿ : ಮೋಸ್ಟ್ ವಾಟೆಂಡ್  ನಕ್ಸಲ್ ನಾಯಕ 61 ಪ್ರಕರಣವಿರುವ ವಿಕ್ರಂ ಗೌಡ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಪಿತೇಬೈಲ್ ನಲ್ಲಿ ಪೊಲೀಸರ ಗುಂಡು ತಗುಲಿ ಸಾವನ್ನಪ್ಪಿದ್ದು ಈತನ ದೇಹಕ್ಕೆ ಮೂರು ಗುಂಡು ತಗುಲಿದೆ ಎಂದು ಹೆಬ್ರಿ ಎ.ಎನ್.ಎಫ್ ಪೊಲೀಸರಿಂದ ಮಾಹಿತಿ ಲಭ್ಯವಾಗಿದೆ.
ವಿಕ್ರಂ ಗೌಡ ಮತ್ತು ಇತರರು ನ.18 ರಂದು ರಾತ್ರಿ ಹೆಬ್ರಿ ತಾಲೂಕಿನ ಪಿತೇಬೈಲ್ ನಿವಾಸಿ ಸುಧಾಕರ್ ಎಂಬವರ ಮನೆಗೆ ಬರುತ್ತಿರುವ ಮಾಹಿತಿ ಎ.ಎನ್.ಎಫ್ ಅಂತರಿಕ (ISD) ಗೆ ಲಭಿಸಿದ  ಮೇರೆಗೆ ಕೂಬಿಂಗ್ ನಡೆಸುತ್ತಿದ್ದ ಬರುವಾಗ ಅಂಗಳದಲ್ಲಿ ಮುಖಾಮುಖಿಯಾದಾಗ ಶರಣಾಗುವಂತೆ ಸೂಚಿಸಿದಾಗ ವಿಕ್ರಂ ಗೌಡನ ಬಳಿ ನಾಡ ಬಂದೂಕಿನಿಂದ ಗುಂಡು ಹಾರಿಸಲು ಯತ್ನಿಸಿದಾಗ ಹೆಬ್ರಿ ಎ.ಎನ್.ಎಫ್ ಪೊಲೀಸ್ ಸಿಬ್ಬಂದಿ ವಿಕ್ರಂ ಗೌಡನ ಮೇಲೆ ಎ.ಕೆ.47 ಬಂದೂಕಿನಿಂದ ಮೂರು ಸುತ್ತು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.

ವಿಕ್ರಂ ಗೌಡನ ದೇಹದ ತೋಡೆಗೆ ಒಂದು ಗುಂಡು ಹಾಗೂ ಪಕ್ಕೆಲುಬಿಗೆ ಎರಡು ಗುಂಡು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಎ.ಎನ್.ಎಫ್ ಪೊಲೀಸರ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ವಿಕ್ರಂ ಗೌಡ ಜೊತೆಯಲ್ಲಿದ್ದ ಉಳಿದ ನಕ್ಸಲರು ಸ್ಥಳದಿಂದ ಪರಾರಿಯಾಗಿದ್ದು ಅವರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!