ಸುಳ್ಯ: ನಗರದ ಕೆವಿಜಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಅವಿನ್ ಬರಮೇಲು ಎಂಬವರಿಗೆ ತುರ್ತು ರಕ್ತಬೇಕೆನ್ನುವ ಸಂದೇಶದ ಪ್ರಕಾರ ಇಂದು ಉಪವಾಸದ ಮದ್ಯೆಯೇ ವೈದ್ಯರ ಸೂಚನೆಗಳನ್ನು ಪಾಲಿಸಿ ವಿಖಾಯ ರಕ್ತದಾನಿ ಬಳಗದ ಅಜ್ಜಾವರದ ಸದಸ್ಯ ಖಾಲಿದ್ ಅಜ್ಜಾವರ ಹಾಗೂ ಮಾಡಾವು ವಿಖಾಯ ಸದಸ್ಯ ಆರೀಫ್ ಮಾಡಾವು ರಕ್ತದಾನ ಮಾಡಿದರು
ಲಾಕ್ ಡೌನ್ ಮದ್ಯೆ ಜಿಲ್ಲೆಯಲ್ಲಿ ವಿಖಾಯ ಕಾರ್ಯಕರ್ತರು ಸುಮಾರು 45 ಕ್ಕೊ ಅಧಿಕ ಯೂನಿಟ್ ರಕ್ತದಾನ ಮಾಡಿದ್ದು,ಉಪವಾಸದ ಮದ್ಯೆಯೇ ರಕ್ತದಾನ ಮಾಡುವುದಕ್ಕಾಗಿ ಧಾರ್ಮಿಕ ಉಲಮಾಗಳೊಂದಿಗೆ ಸಮಾಲೋಚನೆ ನಡೆಸಿ,ಸುಳ್ಯ ತಾಲೂಕು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ,ಬಾನುಮತಿಯವರೊಂದಿಗೆ ಚರ್ಚಿಸಿ ಉಪವಾಸ ಮದ್ಯೆಯೇ ಉಪವಾಸ ತ್ಯಜಿಸದೆ ರಕ್ತದಾನ ಮಾಡಬಹುದೆಂಬ ಅಭಿಪ್ರಾಯ ಪ್ರಕಾರ ಇಂದು ವಿಖಾಯ ರಕ್ತದಾನಿ ಬಳಗದ ಸದಸ್ಯರು ರಕ್ತದಾನ ಮಾಡಿದರು,
ಹಾಗೆಯೇ ಪುತ್ತೂರು ಧನ್ವಂತ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಫಾತಿಮಾ ಎಂಬವರಿಗೆ ವಿಖಾಯ ರಕ್ತದಾನಿ ಬಳಗದ ಸದಸ್ಯರಾದ ಅಝರುದ್ದೀನ್ ಬೆಳ್ಳಾರೆಯವರು ಇಂದು ರಕ್ತದಾನ ಮಾಡಿದರು