- Advertisement -
![]()
- Advertisement -
ಉಡುಪಿ; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಹೇಗಾದರು ಮಾಡಿ ರಿಲೀಸ್ ಮಾಡಿಸ್ಬೇಕು ಅಂತಾ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ನಿರಂತರ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಮೊನ್ನೆ ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾದ ಬೆನ್ನಲ್ಲೇ ವಿಜಯಲಕ್ಷ್ಮೀ ಇದೀಗ ಕೊಲ್ಲೂರು ಮೂಕಂಬಿಕಾಯ ಮೊರೆ ಹೋಗಿದ್ದಾರೆ.
ಇಂದು ಬೆಳ್ಳಂಬೆಳಗ್ಗೆ ವಿಜಯಲಕ್ಷ್ಮಿ ಹಾಗೂ ಅವರ ಆಪ್ತರು ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಅಲ್ಲದೇ ಪತಿ ಹೆಸರಿನಲ್ಲಿ ಚಂಡಿಕಾ ಯಾಗ ನಡೆಯುತ್ತಿದ್ದು ಪತ್ನಿ ವಿಜಯಲಕ್ಷ್ಮಿ ಭಾಗಿಯಾಗಿದ್ದಾರೆ.
ಜೋರಾಗಿ ಸುರಿಯುತ್ತಿರುವ ಮಳೆಯಲ್ಲೇ ದೇವಸ್ಥಾನಕ್ಕೆ ಐದು ಸುತ್ತು ಬಂದು ಪತಿಗಾಗಿ ಪ್ರಾರ್ಥಿಸಿದ್ದಾರೆ ವಿಜಯಲಕ್ಷ್ಮೀ.ಒಂದು ಕಾನೂನು ಹೋರಾಟ ಮಾಡುತ್ತಿದ್ದರೆ ಮತ್ತೊಂದು ಕಡೆ ನಿರಂತರವಾಗಿ ಪೂಜೆ ಪುನಸ್ಕಾರಗಳಲ್ಲಿ ವಿಜಯಲಕ್ಷ್ಮೀ ತೊಡಗಿಕೊಂಡಿದ್ದಾರೆ.
- Advertisement -


