Wednesday, June 24, 2026
Homeಕರಾವಳಿಮಂಗಳೂರುಬೆಳ್ತಂಗಡಿ : ವಿದ್ವತ್ ಪಿಯು ಕಾಲೇಜಿನ ಅಕ್ರಮ ಬಯಲಿಗೆ: ತ್ಯಾಜ್ಯ ನೀರು ತೋಡಿಗೆ ಬಿಟ್ಟು ಸ್ಥಳೀಯರಿಗೆ...

ಬೆಳ್ತಂಗಡಿ : ವಿದ್ವತ್ ಪಿಯು ಕಾಲೇಜಿನ ಅಕ್ರಮ ಬಯಲಿಗೆ: ತ್ಯಾಜ್ಯ ನೀರು ತೋಡಿಗೆ ಬಿಟ್ಟು ಸ್ಥಳೀಯರಿಗೆ ತೊಂದರೆ

- Advertisement -
- Advertisement -

ಬೆಳ್ತಂಗಡಿ : ಸರಕಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೆಳ್ತಂಗಡಿ ತಾಲೂಕಿನಲ್ಲಿ ಅಕ್ರಮಗಳಿಗೆ ಹೆಸರು ವಾಸಿಯಾಗುತ್ತಿದೆ.ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆ- ವೇಣೂರು ರಸ್ತೆಯಲ್ಲಿರುವ ಬರಾಯಪಲ್ಕೆ ಬಳಿ ಇರುವ ವಿದ್ವತ್ ರೆಸಿಡೆನ್ಸಿಯಲ್ ಪಿಯು ಕಾಲೇಜಿನ ಅಕ್ರಮಗಳು ಒಂದೊಂದಾಗಿ ಹೊರಬರುತ್ತಿದೆ.

ವಿದ್ವತ್ ರೆಸಿಡೆನ್ಸಿಯಲ್ ಪಿಯು ಕಾಲೇಜಿನಲ್ಲಿ STP ಇಲ್ಲದೆ ಕಾಲೇಜ್ ಮತ್ತು ಹಾಸ್ಟೆಲ್ ನಿರ್ಮಾಣ ಮಾಡಿ ಕಳೆದ ಕೆಲ ವರ್ಷಗಳಿಂದ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದು. ಈ ಕಾಲೇಜಿನ ಮಕ್ಕಳ ಹಾಸ್ಟೆಲಿನ ತ್ಯಾಜ್ಯ ನೀರನ್ನು ಸ್ಥಳೀಯ ತೋಡಿನಲ್ಲಿ ಹಾರಿದುಹೋಗುವಂತೆ ಮಾಡಿ ಇಲ್ಲಿನ ನಿವಾಸಿಗಳಿಗೆ ತೊಂದರೆ ನೀಡುತ್ತಿದ್ದಾರೆ. ಈ ಬಗ್ಗೆ ಕುವೆಟ್ಟು ಗ್ರಾಮ ಪಂಚಾಯತ್ ಗೆ ದೂರು ನೀಡಿದ್ರೂ ಯಾವ ಪ್ರಯೋಜನವಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಆರೋಪ ಮಾಡುತ್ತಿದ್ದಾರೆ.

ವಿದ್ವತ್ ಕಾಲೇಜಿನ ತ್ಯಾಜ್ಯ ನೀರು ಹಾರಿದು ದುರ್ವಾಸನೆ ಹಾಗೂ ವಾಸಿಸಲು ಕಷ್ಟವಾಗುತ್ತಿರುವ ಬಗ್ಗೆ ಬರಾಯ ಪಲ್ಕೆ ನಿವಾಸಿ  ನಾರಾಯಣ ಅಚಾರ್ಯ ಕುವೆಟ್ಟು ಗ್ರಾಮ ಪಂಚಾಯತ್ ಗೆ ನ.7 ರಂದು ದೂರು ನೀಡಿದ್ದಾರೆ. ಆದ್ರೆ ಈ ಬಗ್ಗೆ ಕ್ರಮ ಕೈಗೊಳ್ಳದೆ ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಸಂಬಂಧ ಪಟ್ಟವರು ಕಣ್ಣುಮುಚ್ಚಿ ಕುಳಿತಿದ್ದಾರೆ.ವಿದ್ವತ್ ಕಾಲೇಜಿನ ತ್ಯಾಜ್ಯ ನೀರು ಹಾರಿಯುವುದರಿಂದ ಈವರೆಗೂ ಕ್ರಮ ಕೈಗೊಳ್ಳದೆ ಇರುವುದರಿಂದ ಸ್ಥಳೀಯ ನಿವಾಸಿಗಳು ಕಂಗಾಲಾಗಿದ್ದಾರೆ.

- Advertisement -

Latest News

error: Content is protected !!