- Advertisement -
- Advertisement -
ಔರಂಗಾಬಾದ್: ಲಾಕ್ ಡೌನ್ ಹಿನ್ನೆಲೆಯಲ್ಲಿ ಮದುವೆಯೊಂದನ್ನು ವಿಡಿಯೋ ಕರೆ ಮೂಲಕ ನೆರವೇರಿಸಲಾಗಿದೆ. ಹೌದು, ಮಹಾರಾಷ್ಟ್ರದ ಔರಂಗಾಬಾದ್‌ನ ವರ ಮೊಹಮ್ಮದ್ ಮಿನ್ಹಾಜುದ್ ಮತ್ತು ಬೀಡ್ ನಿವಾಸಿ ವಧುವಿನ ವಿಡಿಯೋ ಕಾಲ್ ಮಧ್ಯಸ್ಥಿಕೆಯಲ್ಲಿ ನಡೆದ ಮದುವೆಯಲ್ಲಿ ಗೃಹಸ್ಥಾಶ್ರಮ ಪ್ರವೇಶಿಸಿದ್ದಾರೆ.
ಮದುವೆ ದಿನಾಂಕ 6 ತಿಂಗಳ ಹಿಂದೆಯೇ ನಿಗದಿಯಾಗಿತ್ತು. ಸದ್ಯದ ಸ್ಥಿತಿ ಹಿನ್ನೆಲೆಯಲ್ಲಿ ಮದುವೆ ರದ್ದು ಮಾಡದೆ, ಎರಡೂ ಕುಟುಂಬಗಳ ಸದಸ್ಯರು ಸೇರಿ ಮನೆಯಲ್ಲೇ ವಿಡಿಯೋ ಕರೆ ಮೂಲಕ ಮದುವೆ ನೆರವೇರಿಸಿದೆವು ಎಂದು ವಧುವಿನ ತಂದೆ ಹೇಳಿದರು.
- Advertisement -