Thursday, June 4, 2026
Homeತಾಜಾ ಸುದ್ದಿರಾಜ್ಯದಲ್ಲಿ ಸಂಚಾರಿ ಪಶು ಚಿಕಿತ್ಸಾ ವಾಹನಗಳ ಲೋಕಾರ್ಪಣೆ : ದಕ್ಷಿಣ ಕನ್ನಡ ಜಿಲ್ಲೆಗೆ 2 ವಾಹನ...

ರಾಜ್ಯದಲ್ಲಿ ಸಂಚಾರಿ ಪಶು ಚಿಕಿತ್ಸಾ ವಾಹನಗಳ ಲೋಕಾರ್ಪಣೆ : ದಕ್ಷಿಣ ಕನ್ನಡ ಜಿಲ್ಲೆಗೆ 2 ವಾಹನ ಮಂಜೂರು

- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿ ಸಂಚಾರಿ ಪಶು ಚಿಕಿತ್ಸಾ ವಾಹನಗಳ ಲೋಕಾರ್ಪಣೆಯಾಗಿದೆ. ಕೇಂದ್ರ ಪಶು ಸಂಗೋಪನಾ ಸಚಿವ ಪರ್ಷೋತ್ತಮ ರೂಪಾಲಾ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ವಿಧಾನಸೌಧದಲ್ಲಿ ಇಂದು ಲೋಕಾರ್ಪಣೆ ಮಾಡಿದ್ದಾರೆ.

ರಾಜ್ಯಕ್ಕೆ ಹೊಸದಾಗಿ 275 ಸಂಚಾರಿ ಪಶು ಚಿಕಿತ್ಸಾ ವಾಹನಗಳು ಮಂಜೂರಾಗಿದ್ದು, ಇವತ್ತು 70 ಪಶು ಚಿಕಿತ್ಸಾ ಸಂಚಾರಿ ವಾಹನಗಳ ಲೋಕಾರ್ಪಣೆಯಾಗಿದೆ. ಸಂಚಾರಿ ಪಶು ಚಿಕಿತ್ಸಾ ವಾಹನಗಳಿಗೆ ಟೋಲ್ ಫ್ರೀ ನಂಬರ್ 1962 ನಿಗದಿಪಡಿಸಲಾಗಿದ್ದು, ಪ್ರತೀ ಒಂದು ಲಕ್ಷ ಜಾನುವಾರುಗಳಿಗೆ ಒಂದು ಸಂಚಾರಿ ಪಶು ಚಿಕಿತ್ಸಾ ವಾಹನ ನೀಡಲಾಗಿದೆ.

11 ಜಿಲ್ಲೆಗಳಲ್ಲಿ ಒಟ್ಟು 70 ವಾಹನಗಳ ಸೇವೆಗೆ ಚಾಲನೆ ನೀಡಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ 2 ಮತ್ತು ಕೊಡಗು ಜಿಲ್ಲೆಗೆ 1 ಸಂಚಾರಿ ವಾಹನ ನೀಡಲಾಗಿದೆ.

- Advertisement -

Latest News

error: Content is protected !!