Thursday, June 4, 2026
Homeಕರಾವಳಿಹಿರಿಯ ತುಳು ಹಾಗೂ ಕನ್ನಡ ಸಾಹಿತಿ  ಆರ್. ಲಲಿತಾ ರೈ ವಿಧಿವಶ

ಹಿರಿಯ ತುಳು ಹಾಗೂ ಕನ್ನಡ ಸಾಹಿತಿ  ಆರ್. ಲಲಿತಾ ರೈ ವಿಧಿವಶ

- Advertisement -
- Advertisement -

ಮಂಗಳೂರು: ಹಿರಿಯ ತುಳು ಮತ್ತು ಕನ್ನಡ ಸಾಹಿತಿ ಆರ್. ಲಲಿತಾ ರೈ ಅವರು ತಮ್ಮ 97ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ. 

ಬರಹಗಾರ್ತಿಯಾಗಿ ಲಲಿತಾ ರೈ ಅವರ ನಿಯತಕಾಲಿಕಗಳಲ್ಲಿ ನೂರಾರು ಬರಹಗಳನ್ನು ಪ್ರಕಟಿಸಿದ್ದು, ‘ಚಿತ್ತಗಾಂಗಿನ ಕ್ರಾಂತಿವೀರರು’, ‘ಕನ್ನಡ ಸಣ್ಣ ಕತೆಗಳ ಸಂಕಲನ’, ‘ಮತ್ತೆ ಬೆಳಗಿತು’, ‘ಸೊಡರು ಮತ್ತು ಇತರ ಕಥೆಗಳು’, ‘ಇಂಟರ್‌ನೆಟ್‌ನ ಒಳಗೆ ಮತ್ತು ಇತರ ಕತೆಗಳು’, ‘ತುಳು ಸಣ್ಣಕತೆಗಳ ಸಂಕಲನ-1’ ಹಾಗೂ ‘ದೇಸಾಂತರ’, ‘ಬೋಂಟೆ ದೇರೆಂಡ್’ ಅವರ ಪ್ರಮುಖ ತುಳು ಕಾದಂಬರಿಗಳಾಗಿವೆ.

ಇವರ ‘ಇಂಟರ್‌ನೆಟ್‌ನ ಒಳಗೆ ಮತ್ತು ಇತರ ಕಥೆಗಳು’ ಕೃತಿಗೆ ಕರ್ನಾಟಕ ಲೇಖಕಿಯರ ಸಂಘದಿಂದ ತ್ರಿವೇಣಿ ಪುರಸ್ಕಾರ, ನಿರತ ಸಾಹಿತ್ಯ ಸಂಪದ ಸಂಸ್ಥೆಯಿಂದ ‘ಓಟು ಯಾರಿಗೆ’ ಕೃತಿಗೆ ಮೊದಲ ಬಹುಮಾನ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ‘ವೀರರಾಣಿ ಅಬ್ಬಕ್ಕ ಪ್ರಶಸ್ತಿ’ ಮುಂತಾದ ಹಲವು ಗೌರವಗಳು ಸಂದಿವೆ.

- Advertisement -

Latest News

error: Content is protected !!