Friday, June 5, 2026
Homeಕರಾವಳಿಗಣೇಶ ಚತುರ್ಥಿಗೆ ಸೆಪ್ಟಂಬರ್ 19 ರಂದು ಸರ್ಕಾರಿ ರಜೆ ನೀಡಿ;  ಸರ್ಕಾರಕ್ಕೆ ಶಾಸಕ ಡಿ.ವೇದವ್ಯಾಸ್ ಕಾಮತ್...

ಗಣೇಶ ಚತುರ್ಥಿಗೆ ಸೆಪ್ಟಂಬರ್ 19 ರಂದು ಸರ್ಕಾರಿ ರಜೆ ನೀಡಿ;  ಸರ್ಕಾರಕ್ಕೆ ಶಾಸಕ ಡಿ.ವೇದವ್ಯಾಸ್ ಕಾಮತ್ ಆಗ್ರಹ

- Advertisement -
- Advertisement -

ಮಂಗಳೂರು; ಗಣೇಶ ಚತುರ್ಥಿಗೆ ಸೆಪ್ಟಂಬರ್ 19 ರಂದು ಸರ್ಕಾರಿ ರಜೆ ನೀಡಿ  ಎಂದು  ಸರ್ಕಾರಕ್ಕೆ ಶಾಸಕ ಡಿ.ವೇದವ್ಯಾಸ್ ಕಾಮತ್ ಆಗ್ರಹಿಸಿದ್ದಾರೆ.

ಸೆಪ್ಟೆಂಬರ್ 18 ರಂದು ಗಣೇಶ ಚತುರ್ಥಿಗೆ ಸರ್ಕಾರಿ ರಜೆ ನೀಡಲಾಗಿದೆ.ಆದರೆ ಎಲ್ಲೆಡೆ ಸೆಪ್ಟೆಂಬರ್ 19 ರಂದು ಚೌತಿ ಆಚರಣೆ ಮಾಡಲಾಗುತ್ತಿದೆ. ಹಾಗಾಗಿ ಆ ದಿನವನ್ನು ವರ್ಕಿಂಗ್ ಡೇ ಎಂದು ಪರಿಗಣಿಸಿದರೆ ಹಬ್ಬದ ಸಂಭ್ರಮವನ್ನೇ ಕಸಿದುಕೊಂಡಂತಾಗುತ್ತದೆ. ಸದಾ ಹಿಂದೂಗಳ ಹಬ್ಬದ ವಿಷಯದಲ್ಲಿ ಏಕಪಕ್ಷೀಯವಾಗಿ ವರ್ತಿಸುವ ಕಾಂಗ್ರೆಸ್ ತನ್ನ ಹಳೆಯ ಛಾಳಿ ಬಿಟ್ಟು ಗಣೇಶ ಚತುರ್ಥಿ ರಜೆಯನ್ನು ಸೆಪ್ಟೆಂಬರ್ 19 ರಂದೇ ನೀಡಿ ಎಲ್ಲರೂ ಕುಟುಂಬದ ಜೊತೆಗೂಡಿ ಸಂಭ್ರಮದಿಂದ ಹಬ್ಬ ಆಚರಿಸಲು ಅನುಕೂಲ ಕಲ್ಪಿಸಿಕೊಡಬೇಕು ಎಂದು ಸಿಎಂಗೆ ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!