Sunday, June 7, 2026
Homeಕರಾವಳಿಕಾಸರಗೋಡುದೇವ ಮೊಸಳೆ ಬಬಿಯಾಗೆ ಭವ್ಯ ಸ್ಮಾರಕ ನಿರ್ಮಾಣ ಮಾಡಬೇಕು; ಕೇರಳ ಸರ್ಕಾರಕ್ಕೆ ಮಾಜಿ ಶಾಸಕ ವಾಟಾಳ್...

ದೇವ ಮೊಸಳೆ ಬಬಿಯಾಗೆ ಭವ್ಯ ಸ್ಮಾರಕ ನಿರ್ಮಾಣ ಮಾಡಬೇಕು; ಕೇರಳ ಸರ್ಕಾರಕ್ಕೆ ಮಾಜಿ ಶಾಸಕ ವಾಟಾಳ್ ನಾಗರಾಜ್ ಒತ್ತಾಯ

- Advertisement -
- Advertisement -

ಬೆಂಗಳೂರು: ಅನಂತಪುರದ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ನಿನ್ನೆ ಮರಣ ಹೊಂದಿದ ದೇವ ಮೊಸಳೆ ಬಬಿಯಾಗೆ ಭವ್ಯ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ಮತ್ತು ಮಾಜಿ ಶಾಸಕ ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ವಿಧಾನಸೌಧದಲ್ಲಿ ಇಂದು ಮಾತನಾಡಿದ ವಾಟಾಳ್ ನಾಗರಾಜ್, ಬಬಿಯಾಗೆ ಸ್ಮಾರಕ ನಿರ್ಮಾಣ ಮಾಡುವಂತೆ ಕೇರಳ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.

ಪ್ರಪಂಚದಲ್ಲೇ ಮೊದಲ ಘಟನೆಯಾಗಿದ್ದು, 70 ವರ್ಷ ಪ್ರಸಾದ ಮಾತ್ರ ತಿಂದು ಬಬಿಯಾ ಬದುಕಿದ್ದು ಅದರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

ಭಾನುವಾರ ರಾತ್ರಿ ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಅನಂತಪುರದಲ್ಲಿರುವ ದೇವಸ್ಥಾನದ ಸರೋವರದಲ್ಲಿ ದೇವ ಮೊಸಳೆ ಬಬಿಯಾ ಮೃತಪಟ್ಟಿತ್ತು.

- Advertisement -

Latest News

error: Content is protected !!