Sunday, June 7, 2026
Homeತಾಜಾ ಸುದ್ದಿಸಿದ್ದರಾಮಯ್ಯನವರೇ ನಿಮ್ಮನ್ನ ಎಲ್ಲಿ ನಿಲ್ಲಿಸಬೇಕು ಅಲ್ಲಿ ನಿಲ್ಲಿಸುತ್ತೇವೆ: ಯಡಿಯೂರಪ್ಪ ಎಚ್ಚರಿಕೆ

ಸಿದ್ದರಾಮಯ್ಯನವರೇ ನಿಮ್ಮನ್ನ ಎಲ್ಲಿ ನಿಲ್ಲಿಸಬೇಕು ಅಲ್ಲಿ ನಿಲ್ಲಿಸುತ್ತೇವೆ: ಯಡಿಯೂರಪ್ಪ ಎಚ್ಚರಿಕೆ

- Advertisement -
- Advertisement -

ರಾಯಚೂರು: ಸಿದ್ದರಾಮಯ್ಯನವರೇ ನೀವು ಬಾಯಿ ಮುಚ್ಚಿಕೊಂಡು ಸ್ವಲ್ಪ ಸುಮ್ಮನಿರಿ. ಮೋದಿ ಬಗ್ಗೆ ಮಾತನಾಡುವ ಯೋಗ್ಯತೆಯಿದೆಯಾ ನಿಮಗೆ. ಪ್ರಧಾನಿ ಕಾಲಡಿ ಕುಳಿತುಕೊಳ್ಳುವ ಯೋಗ್ಯತೆಯೂ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿ.ಎಸ್ ಯಡಿಯೂರಪ್ಪ ಗುಡುಗಿದ್ದಾರೆ

ರಾಯಚೂರು ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಬಚ್ಚಾ ರಾಹುಲ್ ಗಾಂಧಿ ಮೋದಿ ಬಗ್ಗೆ ಮಾತನಾಡುತ್ತಾನೆ. ನಿಮ್ಮ ಎಲ್ಲಾ ಹಗರಣಗಳನ್ನ ಬಯಲಿಗೆಳೆಯುತ್ತೇವೆ. ಮುಂಬರುವ ವಿಧಾನ ಮಂಡಲದಲ್ಲಿ ನಿಮ್ಮ ಹಗರಣಗಳನ್ನ ಬಯಲಿಗೆಳೆಯುತ್ತೇವೆ. ನಿಮ್ಮ ಹಗರಣಗಳನ್ನ ತನಿಖೆ ಮಾಡಿಸಿ, ನಿಮ್ಮನ್ನ ಎಲ್ಲಿ ನಿಲ್ಲಿಸಬೇಕು ಅಲ್ಲಿ ನಿಲ್ಲಿಸುತ್ತೇವೆ ಎಂದು ಸಿದ್ದರಾಮಯ್ಯಗೆ ಬಿಎಸ್‍ವೈ ಎಚ್ಚರಿಕೆ ನೀಡಿದರು.

- Advertisement -

Latest News

error: Content is protected !!