Friday, April 19, 2024
Homeಆರಾಧನಾನಾಳೆ ವರಮಹಾಲಕ್ಷ್ಮಿ ಪೂಜೆ: ಈ ಸಮಯದಲ್ಲಿ ತಯಾರಿ ಹೇಗಿರಬೇಕು?

ನಾಳೆ ವರಮಹಾಲಕ್ಷ್ಮಿ ಪೂಜೆ: ಈ ಸಮಯದಲ್ಲಿ ತಯಾರಿ ಹೇಗಿರಬೇಕು?

spot_img
- Advertisement -
- Advertisement -

ಶ್ರಾವಣ ಮಾಸದ ಶುಕ್ರವಾರ. ವರವನ್ನು ಕೊಡುವ ಲಕ್ಷ್ಮಿ ದೇವಿಯ ಆರಾಧನೆ ಮಾಡುವ ದಿನ. ಅನೇಕ ಮುತ್ತೈದೆಯರು ವರಮಹಾಲಕ್ಷ್ಮಿ ವ್ರತವನ್ನು ಶ್ರದ್ಧಾ ಭಕ್ತಿಯಿಂದ ನೆರೆವೇರಿಸ್ತಾರೆ. ಕುಟುಂಬಕ್ಕೆ, ಮುಖ್ಯವಾಗಿ ಪತಿಯ ಆರೋಗ್ಯಾಭಿವೃದ್ಧಿ ನೀಡುವಂತೆ ಬೇಡಿ ಈ ಪೂಜೆ ಸಲ್ಲಿಸಲಾಗುತ್ತದೆ.

ಈ ಪೂಜೆಯನ್ನು ಸಾಮಾನ್ಯವಾಗಿ ಮಹಿಳೆಯರು ನಿರ್ವಹಿಸುತ್ತಾರೆ. ಆದ್ದರಿಂದ ಅವರು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ಸ್ನಾನವನ್ನು ಮಾಡಿ ಮನೆ ಶುಚಿ ಮಾಡಿ ಪೂಜೆ ಆರಂಭಿಸಬೇಕು. ಗಣೇಶನ ನಾಮ ಜಪಿಸುವುದರೊಂದಿಗೆ ಪೂಜೆಯನ್ನು ಆರಂಭಿಸಲಾಗುತ್ತದೆ. ನಂತರ ಲಕ್ಷ್ಮಿ ಸ್ತ್ರೋತ್ರವನ್ನು ಪಠಿಸಲಾಗುತ್ತದೆ. ನಂತರ ದೇವಿಗೆ ಆರತಿಯನ್ನು ಬೆಳಗಿ ಪ್ರಸಾದವನ್ನು ಅರ್ಪಿಸಲಾಗುತ್ತದೆ.

ವ್ರತದ ಮೊದಲ ಭಾಗ ಸ್ವಚ್ಛತೆ.
ಮನೆಯನ್ನು ಸ್ವಚ್ಛವಾಗಿಡುವುದು ಬಹು ಮುಖ್ಯ. ಲಕ್ಷ್ಮಿ ದೇವಿ, ಶುದ್ಧವಿರುವ ಮನೆ ಪ್ರವೇಶಿಸುತ್ತಾಳೆಂಬ ನಂಬಿಕೆ ಇದೆ. ಹಾಗಾಗಿ ಮೊದಲು ಮಹಿಳೆಯಾದವಳು ಮನೆಯನ್ನು ಸ್ವಚ್ಛಗೊಳಿಸಬೇಕು.

ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ, ಮಡಿಯುಟ್ಟು ದೇವರ ಮನೆಯನ್ನು ಸ್ವಚ್ಛಗೊಳಿಸಿ, ದೇವರ ಮನೆಯಲ್ಲಿ ಚೆಂದದ ರಂಗೋಲಿ ಹಾಕಿ. ಎಂಟು ದಳಗಳ ಕಮಲದ ಹೂವಿನ ರಂಗೋಲಿ ಬಹಳ ಶ್ರೇಷ್ಠ. ಈ ರಂಗೋಲಿ ಮೇಲೆ ಅಕ್ಕಿ ಹರಡಿದ ಬಟ್ಟಲನ್ನು ಇಡಿ. ಅದರ ಮೇಲೆ ಕಳಶವನ್ನಿಡಬೇಕು. ಒಂದು ಚೊಂಬಿಗೆ ನೀರು, ಅಕ್ಕಿ, ಅಡಿಕೆ, ನಾಣ್ಯ, ಹಾಕಬೇಕು. ನಂತ್ರ ಕಳಶಕ್ಕೆ ಅರಿಶಿನ ಕುಂಕುಮ ಸವರಬೇಕು, ಅದರ ಮೇಲೆ ತೆಂಗಿನ ಕಾಯಿ ಇಡಬೇಕು. ಅದಕ್ಕೆ ದೇವಿಯ ಬೆಳ್ಳಿ ಮುಖವಾಡವನ್ನು ಇಡಬೇಕು. ನಂತ್ರ ಕಳಶದ ಬಾಯಿಗೆ ಮಾವಿನ ಎಲೆ ಹಾಗೂ ವೀಳ್ಯದೆಲೆಯನ್ನಿಡಬೇಕು. ಕಳಶಕ್ಕೆ ಹೊಸ ಬಟ್ಟೆ ಉಡಿಸಿ, ಸಿಂಗಾರ ಮಾಡಬೇಕು. ನಂತ್ರ ಲಕ್ಷ್ಮಿ ಆವಾಹನೆ ಮಾಡಿ ಪೂಜೆ ಮಾಡಬೇಕು.

ದೇವಿ ಪೂಜೆಗೆ ಬೇಕಾಗುವ ಸಿಹಿಯನ್ನು ತಯಾರಿಸಿಕೊಳ್ಳಲು ಸಿದ್ಧತೆಗಳನ್ನು ಮಾಡಿಕೊಳ್ಳಿ. ಈ ಹಬ್ಬಂದದು ಒಂಭತ್ತು ಬಗೆಯ ಅಥವಾ ಬೆಸ ಸಂಖ್ಯೆಯಲ್ಲಿ ಸಿಹಿಯನ್ನು ಮಾಡಿ.  ಸಾಮಾನ್ಯವಾಗಿ ವರಮಹಾಲಕ್ಷ್ಮಿಗೆ ಪುಳಿಯೊಗರೆ, ಹೋಳಿಗೆ, ಸಜ್ಜಿಗೆ, ರವೆಯುಂಡೆ, ಶಾವಿಗೆ ಪಾಯಸ, ಕರ್ಜಿಕಾಯಿ ಶ್ರೇಷ್ಠವಾದದ್ದು. ಕೋಡುಬಳೆ, ಚಕ್ಕುಲಿಯನ್ನು ಕೂಡ ದೇವಿಗೆ ನೈವೇದ್ಯ ಮಾಡುತ್ತಾರೆ. ಹಾಗಾಗಿ ಇವುಗಳಲ್ಲಿ ಯಾವುದನ್ನು ಮಾಡಬೇಕು ಎಂಬುದನ್ನು ನಿರ್ಧರಿಸಿ ತಯಾರಿ ಮಾಡಿಕೊಳ್ಳಿ.

ಈ ಸಮಯದಲ್ಲಿ ಈ ಶ್ಲೋಕವನ್ನು ಹೇಳುವುದು ಶ್ರೇಷ್ಟ.
ದ್ವಾದಶಗ್ರಂಥಿ ಸಂಯುಕ್ತಂ ಕೃತಂ ದ್ವಾದಶತಂತುಭಿ:
ಧಾರಯಾಮಿ ಮಹಾದೇವಿ ಸೂತ್ರಂ ತೇ ಸರ್ವಮಂಗಳೇ
ಈ ರೀತಿಯಾಗಿ ನೀವು ವರಮಹಾಲಕ್ಷ್ಮಿ ವ್ರತವನ್ನು ಮಾಡಿ ದೇವಿಯ ಕೃಪೆಗೆ ಪಾತ್ರರಾಗಿ.

ಈ ರೀತಿಮಾಡಿದಲ್ಲಿ ಧನಾಗಮನ, ಅಷ್ಟಐಶ್ವರ್ಯ ಪ್ರಾಪ್ತಿ, ಕಂಕಣಭಾಗ್ಯ, ವ್ಯವಹಾರದಲ್ಲಿ ಜಯಲಭಿಸುವುದು.

- Advertisement -
spot_img

Latest News

error: Content is protected !!