Wednesday, June 3, 2026
Homeತಾಜಾ ಸುದ್ದಿಚಿತ್ರರಂಗಕ್ಕೆ ಮತ್ತೊಂದು ಶಾಕ್: ಯುವ ನಟ ಆತ್ಮಹತ್ಯೆಗೆ ಶರಣು

ಚಿತ್ರರಂಗಕ್ಕೆ ಮತ್ತೊಂದು ಶಾಕ್: ಯುವ ನಟ ಆತ್ಮಹತ್ಯೆಗೆ ಶರಣು

- Advertisement -
- Advertisement -

ನಾಂದೇಡ್: ಕೊರೊನಾ ಮಧ್ಯೆ ಚಿತ್ರರಂಗದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗ್ತಿವೆ. ಮರಾಠಿ ನಟ ಅಶುತೋಷ್ ಭಕ್ರೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಶುತೋಷ್‌ಗೆ 32 ವರ್ಷ ವಯಸ್ಸು. ಅಶುತೋಷ್ ಮಹಾರಾಷ್ಟ್ರದ ನಾಂದೇಡ್‌ನಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ.

ಪೊಲೀಸರ ಪ್ರಕಾರ, ಅಶುತೋಷ್ ಶವ ನಾಂದೇಡ್‌ನ ಅವರ ಬಂಗಲೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಶುತೋಷ್ ಒಂದು ತಿಂಗಳ ಹಿಂದೆ ನಾಂದೇಡ್‌ಗೆ ಬಂದಿದ್ದರು. ಅಶುತೋಷ್ ಆತ್ಮಹತ್ಯೆ ಮರಾಠಿ ಚಿತ್ರರಂಗದಲ್ಲಿ ಆಘಾತ, ಆತಂಕ ಸೃಷ್ಟಿಸಿದೆ.

ಅಶುತೋಷ್ ಪತ್ನಿ ನಟಿ ಮಯೂರಿ ದೇಶ್ಮುಖ್. ಜನವರಿ 21,2016 ರಂದು ಮಯೂರಿ ಮತ್ತು ಅಶುತೋಷ್ ವಿವಾಹವಾಗಿದ್ದರು.ಇಬ್ಬರ ಮಧ್ಯೆ ಸಂಬಂಧ ಚೆನ್ನಾಗಿಯೇ ಇತ್ತು ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಕಳೆದ ಕೆಲ ದಿನಗಳಿಂದ ಅವರು ಖಿನ್ನತೆಯಿಂದ ಬಳಲುತ್ತಿದ್ದರೆನ್ನಲಾಗಿದೆ. ನಂದೇಡ್ನ ಶಿವಾಜಿನಗರ್ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!