Friday, May 3, 2024
Homeತಾಜಾ ಸುದ್ದಿಕನ್ನಡದ ನಟಿ ರಿಷಿಕಾ ಸಿಂಗ್ ಕಾರು ಅಪಘಾತ, ಗಾಯಗೊಂಡು ಆಸ್ಪತ್ರೆಗೆ ದಾಖಲು

ಕನ್ನಡದ ನಟಿ ರಿಷಿಕಾ ಸಿಂಗ್ ಕಾರು ಅಪಘಾತ, ಗಾಯಗೊಂಡು ಆಸ್ಪತ್ರೆಗೆ ದಾಖಲು

spot_img
- Advertisement -
- Advertisement -

ಬೆಂಗಳೂರು: ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಎಸ್.ವಿ ರಾಜೇಂದ್ರಸಿಂಗ್ ಬಾಬುರವರ ಮಗಳು ನಟಿ ರಿಷಿಕಾ ಸಿಂಗ್​ ಕಾರು ಅಪಘಾತದಲ್ಲಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಮಾವಳ್ಳಿ ಬಳಿ ನಡೆದಿದೆ.

ಇದೇ ಕಾರಿನಲ್ಲಿ ರಿಷಿಕಾರ ಮಾವ ಜೈ ಜಗದೀಶ್ ಮೊದಲ ಪತ್ನಿ ಮಗಳು ಅರ್ಪಿತಾ ಕೂಡ ಇದ್ದರು. ಅವರಿಗೂ ಸಹ ಗಾಯವಾಗಿದ್ದು, ಇಬ್ಬರನ್ನು ಶೇಷಾದ್ರಿಪುರಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ​

ರಿಷಿಕಾ ಕನ್ನಡದಲ್ಲಿ ಕಂಠಿರವ, ಕಳ್ಳಮಳ್ಳಸುಳ್ಳ, ಕ್ರಾಂತಿ ವೀರ ಸಂಗೋಳ್ಳಿರಾಯಣ್ಣ, ಬೆಂಕಿಬಿರುಗಾಳಿ, ಮಾಣಿಕ್ ಸೇರಿದಂತೆ ಇತರೆ ಸಿನಿಮಾದಲ್ಲಿ ಅಭಿನಯ ಮಾಡಿದ್ದಾರೆ. ಜೀ ಕನ್ನಡದ `ರಗಳೆ ವಿತ್ ರಿಷಿಕಾ’ ಕಾರ್ಯಕ್ರಮದಿಂದ ಪ್ರಸಿದ್ಧಾರಾಗಿದ್ದರು. ಬಿಗ್‌ಬಾಸ್ ಕನ್ನಡದ ಮೊದಲನೇ ಸೀಸನ್‌ನ ಸ್ಪರ್ಧಿಯಾಗಿದ್ದರು.

- Advertisement -
spot_img

Latest News

error: Content is protected !!