Friday, May 3, 2024
Homeಕರಾವಳಿಧರ್ಮಸ್ಥಳ: ಡಾ.ಎಪಿಜೆ ಅಬ್ದುಲ್ ಕಲಾಂರ ಶಿಷ್ಯನಿಂದ ಡ್ರೋನ್ ಮೂಲಕ ಸಾವಯವ ಸ್ಯಾನಿಟೈಸರ್ ಸಿಂಪಡಣೆ ಪ್ರಾತ್ಯಕ್ಷಿತೆ

ಧರ್ಮಸ್ಥಳ: ಡಾ.ಎಪಿಜೆ ಅಬ್ದುಲ್ ಕಲಾಂರ ಶಿಷ್ಯನಿಂದ ಡ್ರೋನ್ ಮೂಲಕ ಸಾವಯವ ಸ್ಯಾನಿಟೈಸರ್ ಸಿಂಪಡಣೆ ಪ್ರಾತ್ಯಕ್ಷಿತೆ

spot_img
- Advertisement -
- Advertisement -

ಬೆಳ್ತಂಗಡಿ: ದೇಶದೆಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿರುವ ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ದೇಶದ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂರ ಶಿಷ್ಯ ಚೆನ್ನೈನ ಡಾ. ಕಾರ್ತಿಕ್ ನಾರಾಯಣ್ ಮತ್ತು ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದ ನಿರ್ದೇಶಕ ಡಾ. ಸೆಂಥಿಲ್ ಕುಮಾರ್ ತಂಡದಿಂದ ಸಾವಯವ ಸ್ಯಾನಿಟೈಸರ್ ರೂಪಿಸಿದ್ದು, ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಇಂದು ಡ್ರೋನ್ ಮೂಲಕ ಸ್ಯಾನಿಟೈಸರ್ ಸಿಂಪಡಿಸಿ ಪ್ರಾತ್ಯಕ್ಷಿತೆ ನಡೆಸಲಾಯಿತು.

ಅಣ್ಣಾ ವಿಶ್ವವಿದ್ಯಾಲಯದ ಎಂಐಟಿಯಲ್ಲಿ ನಿರ್ಮಿಸಲಾದ ಬ್ಯಾಟರಿ ಚಾಲಿತ ಡ್ರೋನ್ ಬಳಸಿ ಸ್ಯಾನಿಟೈಸ್ ಮಾಡಲಾಗುತ್ತಿದೆ. ಈ ಸಂದರ್ಭ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆಯವರು ಉಪಸ್ಥಿತರಿದ್ದರು.

ಯಾಕೆ ಧರ್ಮಸ್ಥಳದಲ್ಲೇ ಪ್ರಾತ್ಯಕ್ಷಿತೆ?
ವಿಜ್ಞಾನಿ ಡಾ. ಕಾರ್ತಿಕ್ ನಾರಾಯಣ್ ರವರು ಅಮೆರಿಕಾದ ವಾಟರ್ ಲೂ ವಿಶ್ವವಿದ್ಯಾಲಯದಲ್ಲಿ ಭಾಷಾವಿಜ್ಞಾನದಲ್ಲಿ ಪಿ.ಹೆಚ್.ಡಿ ಹಾಗೂ ವಿಶೇಷ ಸಂಶೋಧನೆ ಮಾಡಲು ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆಯವರು ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಿದ್ದರು. ಹಾಗಾಗಿ ಕಾರ್ತಿಕ್ ನಾರಾಯಣ್ ನೇತೃತ್ವದ ತಯಾರಿಸಿದ ಡ್ರೋನ್ ನ ಪ್ರಾತ್ಯಕ್ಷಿತೆಯನ್ನು ಧರ್ಮಸ್ಥಳದಲ್ಲಿ ನೀಡಿದ್ದಾರೆ.

ಡ್ರೋನ್ ನ ವಿಶೇಷತೆ:
ಚೆನ್ನೈನ ಅಣ್ಣಾಮಲೈ ವಿಶ್ವವಿದ್ಯಾಲಯದ ಎಂ.ಐ.ಟಿಯಲ್ಲಿ ನಿರ್ಮಿಸಲಾದ ಬ್ಯಾಟರಿ ಚಾಲಿತ ಡ್ರೋನ್ ಬಳಸಿ ಯಾವುದೇ ಕಟ್ಟಡದ ಹೊರವಲಯಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಬಹುದು. ಈ ಯೋಜನನೆಯ ಕಲ್ಪನೆಯು ಜಗತ್ತು ಕಂಡ ಮಿಸೆಲ್ ಮ್ಯಾನ್, ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂರ ಕನಸಿನ ಕೂಸಾಗಿತ್ತು. ಡ್ರೋನ್ 16 ಲೀಟರ್ ದ್ರವ ತುಂಬಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದು,ನಿರಂತರ ಐದು ಗಂಟೆಗಳ ಕಾಲ ಬಳಸಬಹುದು.

- Advertisement -
spot_img

Latest News

error: Content is protected !!