Friday, April 26, 2024
Homeಉದ್ಯಮಈ ಹುಡುಗಿಯ ಹೊಸ ಟೆಕ್ನಿಕ್ ಕೃಷಿಗೆ ವಿದೇಶಿಗರು ಸಖತ್ ಫಿದಾ..

ಈ ಹುಡುಗಿಯ ಹೊಸ ಟೆಕ್ನಿಕ್ ಕೃಷಿಗೆ ವಿದೇಶಿಗರು ಸಖತ್ ಫಿದಾ..

spot_img
- Advertisement -
- Advertisement -

80% ರೈತರು ತಮ್ಮ ಮಕ್ಕಳು ತಮ್ಮಂತೆ ರೈತರು ಆಗಲಿ ಎಂದು ಬಯಸುವುದಿಲ್ಲ ಅದಕ್ಕೆ ಕಾರಣ ವ್ಯವಸಾಯ ಅಂದ್ರೆ ನಷ್ಟ ಹಗಲಿರುಳು ಕಷ್ಟ ಪಟ್ಟರೂ ಕೈಗೆ ಬಿಡಿಕಾಸು ಬರಲ್ಲ
ಜೀವನ ಉತ್ತಮವಾಗಿರಲ್ಲ ಅನ್ನೋದು ಆದ್ರೆ ಪಂಜಾಬ್ ಹಾಗೂ ಹರಿಯಾಣ ರೈತರು ವ್ಯವಸಾಯ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ.ಹೇಗೆ ಇಸ್ರಾಯಿಲ್ , ಅಮೆರಿಕ , ನ್ಯೂಜಿಲೆಂಡ್ , ಥಾಯ್ಲೆಂಡ್ ರೈತರು ಕೋಟಿ ಕೋಟಿ ಗಳಿಸಿ ದೊಡ್ಡ ಬ್ಯುಸಿನೆಸ್ ಮೆನ್ ಹಾಗೆ ಬದುಕುತ್ತಿದ್ದಾರೆ ಹೇಗೆ?

ಯಾಕಂದ್ರೆ ಅವರು ಮುಂದೆಹೋಗಿದ್ದಾರೆ.ನಾವು 70 ವರ್ಷದ ಹಿಂದೆ ಮಾಡುತ್ತಿದ್ದ ಪದ್ಧತಿಯನ್ನೇ ಮಾಡುತ್ತಾ ಅದೇ ವಿಧಾನ ಬಳಸುತ್ತಾ ಅಲ್ಲೇ ಉಳಿದುಕೊಂಡು ಬಿಟ್ಟಿದ್ದೇವೆ.ಹಿಂದಿನ ಕಾಲದಲ್ಲಿ ಕುದುರೆ , ಎತ್ತಿನ ಗಾಡಿಯಲ್ಲಿ ಪ್ರಯಾಣ ಮಾಡ್ತಿದ್ವಿ ಈಗ ಬಸ್ಸು , ಕಾರು , ವಿಮಾನದಲ್ಲಿ.ಹಾಗಾಗಿ ಹೊಸ ಪದ್ಧತಿಗಳಿಗೆ ಹೊಂದಿಕೊಳ್ಳಬೇಕು ಅಲ್ಲವೇ.

ಲಕ್ಷ ಲಕ್ಷ ಬರುತ್ತಿದ್ದ ಕೆಲಸ ಬಿಟ್ಟು ಈ ಹುಡುಗಿ ವ್ಯವಸಾಯ ಮಾಡುತ್ತಾ ಹೇಗೆ ಯಶಸ್ಸು ಕಂಡಿದ್ದಾರೆ ಗೊತ್ತಾ??

ಇವರ ಹೆಸರು ವಲ್ಲಾರಿ ಚಂದ್ರಾಕರ್ ಛತ್ತೀಸ್ಗಡ ರಾಜ್ಯದವರು.ಕಂಪ್ಯೂಟರ್ ಸೈನ್ಸ್ನಲ್ಲಿ ಎಂಟೆಕ್ ಮಾಡಿದ ವಲ್ಲಾರಿಗೆ ಲಕ್ಷ ಲಕ್ಷ ಸಂಬಳ ಕೊಡುವ ಕೆಲಸ ಸಿಕ್ಕಿತ್ತು ಆದರೆ ಅದು ಇಷ್ಟ ಇಲ್ಲದೆ ಒಂದಷ್ಟು ತಿಂಗಳು ಕಾಲೇಜ್ ಪ್ರೊಫೆಸರ್ ಆಗಿ ಕೆಲಸ ಮಾಡಿದರೂ.ರಾಯಪುರದಿಂದ ಆಗಾಗ ತಮ್ಮ ಹಳ್ಳಿಗೆ ಬರುತ್ತಿದ್ದ ವಲ್ಲಾರಿಗೆ ವ್ಯವಸಾಯದ ಮೇಲೆ ಹೆಚ್ಚು ಆಸಕ್ತಿ ಬೆಳೆಯಿತು ಆಗ ತಂದೆಯ ಬಳಿ ನನಗೆ ಒಂದಷ್ಟು ಜಮೀನು ಖರೀದಿ ಮಾಡಿ ಕೊಡಿ ನಾನು ವ್ಯವಸಾಯ ಮಾಡುತ್ತೇನೆ ಎಂದು ಹೇಳಿದರೂ ವಲ್ಲಾರಿ.

ಆಗ ಅಲ್ಲಿನ ಜನ ಈ ಹುಡುಗಿ ಓದಿರುವ ಅನಕ್ಷರಸ್ಥೆ ಎಂದು ಗೇಲಿ ಮಾಡಿದರು ಆದರೆ ಮಗಳ ಆಸೆಯಂತೆ 15 ಎಕರೆ ಜಮೀನನ್ನು ಖರೀದಿ ಮಾಡಿಕೊಟ್ಟರೂ ವಲ್ಲಾರಿ ತಂದೆ ಆಗ ಒಂದಷ್ಟು ವ್ಯವಸ್ಥಿತ ಸ್ಕೆಚ್ ಹಾಕಿದ ಈ ಹುಡುಗಿ ರೈತರು ನಷ್ಟ ಅನುಭವಿಸುತ್ತಿರುವ ಸಾಂಪ್ರದಾಯಿಕ ಪದ್ಧತಿಯಿಂದ ಆಚೆ ಬಂದು ಹೊಸ ಪದ್ಧತಿಯಲ್ಲಿ ವ್ಯವಸಾಯ ಮಾಡಬೇಕು ಎಂದು ನಿರ್ಧರಿಸಿದರು.

ಆಗ ಆಧುನಿಕ ವ್ಯವಸಾಯ ಪದ್ಧತಿಯ ಬಗ್ಗೆ ಒಂದಷ್ಟು ರಿಸರ್ಚ್ ಮಾಡಿದ ವಲ್ಲಾರಿ ಇಸ್ರೇಲ್ , ಥಾಯ್ಲೆಂಡ್ನಲ್ಲಿ ಮಾಡುತ್ತಿದ್ದ ಅಡ್ವಾನ್ಸ್ಡ್ ಕೃಷಿ ಪದ್ಧತಿಯ ಬಗ್ಗೆ ಇಂಟರ್ನೆಟ್ ನಲ್ಲಿ ನೋಡಿ ಅದೇ ಪದ್ಧತಿಯಲ್ಲಿ ವ್ಯವಸಾಯ ಮಾಡಲು ಪ್ರಾರಂಭ ಮಾಡಿದರು.
ಎಲ್ಲಿ ಪ್ರಯತ್ನ ಇರುತ್ತದೋ ಅಲ್ಲಿ ಫಲಾ ಇದ್ದೇ ಇರುತ್ತದೆ ಅಲ್ಲವೆ .ಮೊದಲು ಒಂದೆರಡು ತಿಂಗಳು ವಲ್ಲಾರಿಗೆ ಕಷ್ಟ ಆಯ್ತು ನಂತರ ಅದರ ಲಯ ಕಂಡುಕೊಂಡರು ನಂತರ ಅಡ್ವಾನ್ಸ್ಡ್ ಪದ್ಧತಿಯಲ್ಲಿ ಬೀನ್ಸ್ , ಟೊಮೆಟೊ , ಹಾಗಲ ಕಾಯಿ , ಕ್ಯಾಪ್ಸಿಕಂ , ಮೆಣಸಿನಕಾಯಿ ಬೆಳೆಯಲು ಮುಂದಾಗಿ ಅದರಲ್ಲಿ ಸಖತ್ ಸಕ್ಸಸ್ ಕಂಡರು.
ಈಗ ಬಂಪರ್ ಇಳುವರಿ ತೆಗೆಯುತ್ತಿರುವ ವಲ್ಲಾರಿ ಅವುಗಳನ್ನು ಡೆಲ್ಲಿ , ಬೆಂಗಳೂರು , ನಾಗ್ಪುರ್ , ಭೋಪಾಲ್ ನಗರಗಳಲ್ಲಿ ಮಾರಾಟ ಮಾಡುತ್ತಿದ್ದಾರೆ ಅಷ್ಟೇ ಅಲ್ಲದೆ ವಲ್ಲಾರಿ ಬೆಳೆಯುತ್ತಿರುವ ತರಕಾರಿ ನೋಟದಲ್ಲಿ ಗುಣಮಟ್ಟದಲ್ಲಿ ಸೂಪರ್ ಆಗಿರುವುದರಿಂದ ದುಬೈ , ಇಸ್ರಾಯಿಲ್ ನಿಂದ ಭಾರಿ ಆರ್ಡರ್ಸ್ ಬರುತ್ತಿದ್ದು ಅಲ್ಲಿಗು ರಫ್ತು ಮಾಡುತ್ತಿದ್ದಾರೆ.
ಹಾಗೆ ತಿಂಗಳಿಗೆ ಲಕ್ಷ ಲಕ್ಷ ಹಣ ಗಳಿಸುತ್ತಿದ್ದಾರೆ.

ಹಾಗಾಗಿ ಅಡ್ವಾನ್ಸ್ಡ್ ಪದ್ಧತಿಯನ್ನು ಬೇಗ ಅರ್ಥ ಮಾಡಿಕೊಳ್ಳಬಲ್ಲ ಇಂದಿನ ಯುವ ಪೀಳಿಗೆ ವ್ಯವಸಾಯದ ಕಡೆ ಹೆಚ್ಚು ಒಲವು ತೋರಿದರೆ ಆರೋಗ್ಯ ಜೀವನದ ಜೊತೆ ಐಷಾರಾಮಿ ಜೀವನ ಕೂಡ ನಡೆಸಬಹುದು.

- Advertisement -
spot_img

Latest News

error: Content is protected !!