Monday, May 6, 2024
Homeತಾಜಾ ಸುದ್ದಿವಾಹನ ಚಲಾಯಿಸುವಾಗ ಚಾಲಕ ಹ್ಯಾಂಡ್ಸ್ ಫ್ರಿ ಸಾಧನವನ್ನು ಬಳಸಿ, ಮೊಬೈಲ್ ನಲ್ಲಿ ಮಾತನಾಡುತ್ತಿದ್ದರೆ, ಅದನ್ನು ಶಿಕ್ಷಾರ್ಹ...

ವಾಹನ ಚಲಾಯಿಸುವಾಗ ಚಾಲಕ ಹ್ಯಾಂಡ್ಸ್ ಫ್ರಿ ಸಾಧನವನ್ನು ಬಳಸಿ, ಮೊಬೈಲ್ ನಲ್ಲಿ ಮಾತನಾಡುತ್ತಿದ್ದರೆ, ಅದನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸುವುದಿಲ್ಲ: ನಿತಿನ್ ಗಡ್ಕರಿ

spot_img
- Advertisement -
- Advertisement -

ನವದೆಹಲಿ: ಇನ್ಮುಂದೆ ವಾಹನ ಚಲಾಯಿಸುವ ವೇಳೆ ಮೊಬೈಲ್ ನಲ್ಲಿ ಮಾತನಾಡಿದರೆ ಅಪರಾಧ ಎಂದು ಪರಿಗಣಿಸುವುದಿಲ್ಲ ಎಂಬುದಾಗಿ ಇತ್ತೀಚೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದರು. ಆದರೆ ಇದನ್ನು ಅನುಸರಿಸಲು ಕೆಲವೊಂದು ನಿಯಮದ ಅಗತ್ಯವಿದೆ ಎಂದು ತಿಳಿಸಿರುವುದಾಗಿ ವರದಿ ಹೇಳಿದೆ.

ಲೋಕಸಭೆಯಲ್ಲಿ ಗಡ್ಕರಿ ನೀಡಿರುವ ಹೇಳಿಕೆ ಪ್ರಕಾರ, ವಾಹನ ಚಲಾಯಿಸುವಾಗ ಒಂದು ವೇಳೆ ನಿಮ್ಮ ಬಳಿ ಮೊಬೈಲ್ ಇದ್ದರೆ, ಅದು ಹ್ಯಾಂಡ್ಸ್ ಫ್ರೀ ಸಾಧನಕ್ಕೆ ಸಂಪರ್ಕಗೊಂಡಿದ್ದರೆ ಮಾತ್ರ ಮಾತನಾಡಲು ಅನುಮತಿ ನೀಡಲಾಗುತ್ತದೆ. ಅಲ್ಲದೇ ಮೊಬೈಲ್ ಕಾರಿನಲ್ಲಿ ಇಡುವುದಕ್ಕಿಂತ ಹೆಚ್ಚಾಗಿ ಕಿಸೆಯಲ್ಲಿ (ಪಾಕೆಟ್) ಇಡಬೇಕು ಎಂದು ತಿಳಿಸಿರುವುದಾಗಿ ವರದಿ ವಿವರಿಸಿದೆ.

ಕೇಂದ್ರ ಸಚಿವ ಗಡ್ಕರಿ ಅವರ ಮಾತಿನ ಪ್ರಕಾರ, ವಾಹನ ಚಲಾಯಿಸುವಾಗ ಒಂದು ವೇಳೆ ಚಾಲಕ ಹ್ಯಾಂಡ್ಸ್ ಫ್ರಿ ಸಾಧನವನ್ನು ಬಳಸಿ, ಮೊಬೈಲ್ ನಲ್ಲಿ ಮಾತನಾಡುತ್ತಿದ್ದರೆ, ಅದನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಟ್ರಾಫಿಕ್ ಪೊಲೀಸರು ಯಾವುದೇ ದಂಡ ವಿಧಿಸಲು ಸಾಧ್ಯವಿಲ್ಲ. ಒಂದು ವೇಳೆ ಹ್ಯಾಂಡ್ಸ್ ಫ್ರೀ ಬಳಸಿದಾಗಲೂ ದಂಡ ವಿಧಿಸಿದರೆ ಅದನ್ನು ನೀವು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು.

ಒಂದು ವೇಳೆ ವಾಹನ ಚಲಾಯಿಸುವಾಗ ಮೊಬೈಲ್ ನಲ್ಲಿ ಮಾತನಾಡಿದ್ದಕ್ಕಾಗಿ ನಿಮ್ಮನ್ನು ಬಂಧಿಸಿದರೆ, ನೀವು ಈ ಆರೋಪದ ವಿರುದ್ಧ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಬಹುದು ಎಂದು ವರದಿ ತಿಳಿಸಿದೆ.

- Advertisement -
spot_img

Latest News

error: Content is protected !!