Monday, April 29, 2024
HomeWorldಕಾಬೂಲ್: ಸೇಡು ತೀರಿಸಿಕೊಂಡ ಅಮೇರಿಕಾ ; ಐಸಿಸ್ ಖುರಾಸಾನ್ ಉಗ್ರರ ಮೇಲೆ ಏರ್ ಸ್ಟ್ರೈಕ್!

ಕಾಬೂಲ್: ಸೇಡು ತೀರಿಸಿಕೊಂಡ ಅಮೇರಿಕಾ ; ಐಸಿಸ್ ಖುರಾಸಾನ್ ಉಗ್ರರ ಮೇಲೆ ಏರ್ ಸ್ಟ್ರೈಕ್!

spot_img
- Advertisement -
- Advertisement -

ಕಾಬೂಲ್ : ಕಾಬೂಲ್‌ ವಿಮಾನ ನಿಲ್ದಾಣ ಬಳಿ ನಡೆದ ಬಾಂಬ್‌ ದಾಳಿಯಲ್ಲಿ ತನ್ನ 13 ಸೈನಿಕರನ್ನು ಕಳೆದುಕೊಂಡಿದ್ದ ಅಮೆರಿಕ, ಇದರ ಪ್ರತೀಕಾರವಾಗಿ ಸ್ಪೋಟ ನಡೆದ 36 ಗಂಟೆಗಳಲ್ಲಿ ಅಫ್ಘಾನಿಸ್ತಾನದ ನಂಗಾಹರ್ ಪ್ರಾಂತ್ಯದ ಮೇಲೆ ಏರ್ ಸ್ಟ್ರೈಕ್ ನಡೆಸಿದೆ.

ಇಸ್ಲಾಮಿಕ್ ಸ್ಟೇಟ್ ನಡೆಸಿದ ಮಾರಣಾಂತಿಕ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ 169 ಆಫ್ಘನ್ನರು ಮತ್ತು 13 ಅಮೆರಿಕನ್ ಸೇವಾ ಸದಸ್ಯರು ಹತರಾಗಿದ್ದರು.ಈ ದಾಳಿಗೆ ಪ್ರತಿಕಾರವಾಗಿ ಯುಎಸ್ ಮಿಲಿಟರಿ ಪಡೆಗಳು ಐಸಿಸ್ ಉಗ್ರರ ವಿರುದ್ಧ ಡ್ರೋನ್ ದಾಳಿ ನಡೆಸಿವೆ ಎಂದು ವರದಿಯಾಗಿದೆ.

ಅಫ್ಘಾನಿಸ್ತಾನದ ನಂಗರ್‌ಹಾರ್ ಪ್ರಾಂತ್ಯದಲ್ಲಿರುವ ಐಸಿಸ್-ಕೆ ತಾಣದ ಮೇಲೆ ಯುಎಸ್ ಸೇನೆಯು ವಾಯುದಾಳಿ ನಡೆಸಿದೆ ಎಂದು ಅಮೆರಿಕ ಸೇನೆಯ ವಕ್ತಾರ ನೇವಿ ಕ್ಯಾಪ್ಟನ್ ಬಿಲ್ ಅರ್ಬನ್ ಹೇಳಿದ್ದಾರೆ. ನಾವು ಗುರಿ ಸಾಧಿಸಿದ್ದೇವೆ, ಈ ದಾಳಿಯಲ್ಲಿ ಯಾವುದೇ ನಾಗರಿಕ ಸಾವನ್ನಪ್ಪಿಲ್ ಎಂದಿದ್ದಾರೆ.

ಅಮೆರಿಕದ ರಾಷ್ಟ್ರೀಯ ಭದ್ರತಾ ತಂಡವು ಅಧ್ಯಕ್ಷ ಬೈಡೆನ್ ಅವರನ್ನು ಭೇಟಿ ಮಾಡಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸುವಂತೆ ಮನವಿ ಮಾಡಿದೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದ್ದು, ಈ ನಿಟ್ಟಿನಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಹೇಳಲಾಗಿದೆ.

ಕಾಬೂಲ್ ವಿಮಾನ ನಿಲ್ದಾಣ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವಂತೆ ಇಸ್ಲಾಮಿಕ್ ಸ್ಟೇಟ್ ದಾಳಿಕೋರರಿಗೆ ಅಮೆರಿಕ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಈ ವೈಮಾನಿಕ ದಾಳಿಗಳು ನಡೆದಿವೆ.

ಇನ್ನು ಸ್ಫೊಟ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರ ಸಂಘಟನೆಗೆ ನಿನ್ನೆಯಷ್ಟೇ ಖಡಕ್​ ಎಚ್ಚರಿಕೆ ನೀಡಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಅಮೆರಿಕ ವಿರುದ್ಧ ದಾಳಿ ಮಾಡಿದವರು ಎಚ್ಚರಿಕೆಯಿಂದ ಇರಿ. ನಮ್ಮ ವಿರುದ್ಧ ದಾಳಿ ಮಾಡಿದವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ನಿಮ್ಮನ್ನು ನಾವು ಎಂದಿಗೂ ಮರೆಯುವುದಿಲ್ಲ. ನೀವು ಎಲ್ಲೇ ಅವಿತಿದ್ದರೂ ಹೆಕ್ಕಿ ಹೆಕ್ಕಿ ಕೊಲ್ಲುತ್ತೇವೆ ಎಂದು ಹೇಳಿದ್ದರು.

- Advertisement -
spot_img

Latest News

error: Content is protected !!