Sunday, May 5, 2024
Homeತಾಜಾ ಸುದ್ದಿಅಮೆರಿಕಾದ ನೂತನ ಅಧ್ಯಕ್ಷರಾಗಿ ʼಜೋ ಬೈಡನ್‌ʼ, ಉಪಾಧ್ಯಕ್ಷರಾಗಿ ʼಕಮಲಾ ಹ್ಯಾರಿಸ್ʼ ಅಧಿಕೃತ ಆಯ್ಕೆ..!

ಅಮೆರಿಕಾದ ನೂತನ ಅಧ್ಯಕ್ಷರಾಗಿ ʼಜೋ ಬೈಡನ್‌ʼ, ಉಪಾಧ್ಯಕ್ಷರಾಗಿ ʼಕಮಲಾ ಹ್ಯಾರಿಸ್ʼ ಅಧಿಕೃತ ಆಯ್ಕೆ..!

spot_img
- Advertisement -
- Advertisement -

ವಾಷಿಂಗ್ಟನ್: ಅಮೆರಿಕಾದ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಮತ್ತು ಉಪಾಧ್ಯಕ್ಷರಾಗಿ ಭಾರತ ಮೂಲದ ಕಮಲ್‌ ಹ್ಯಾರಿಸ್ ರನ್ನು ಇಂದು ನಡೆದ ಕಾಂಗ್ರೆಸ್‌ ಜಂಟಿ ಅಧಿವೇಶನದಲ್ಲಿ ಅಧಿಕೃತವಾಗಿ ಘೋಷಸಲಾಗಿದೆ.ಹಾಗೆಯೆ ಜನವರಿ 20ರಂದು ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ‌ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಯುಎಸ್​ ಕಾಂಗ್ರೆಸ್​ ಜೋ ಬೈಡನ್​ಗೆ ಗೆಲುವು ದಾಖಲಿಸಿರುವ ಬಗ್ಗೆ ಅಧಿಕೃತ ಪ್ರಮಾಣ ಪತ್ರವನ್ನ ನೀಡಿದೆ. ಎಲೆಕ್ಟೋರಲ್ ಕಾಲೇಜ್ ವೋಟ್​ನಲ್ಲಿ ಜೋ ಬೈಡನ್ 306 ವೋಟುಗಳನ್ನ ಪಡೆದಿದ್ರೆ, ನಿರ್ಗಮಿತ ರಿಪಬ್ಲಿಕನ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 232 ವೋಟ್​​ಗಳನ್ನ ಪಡೆದುಕೊಂಡಿದ್ದಾರೆ ಅಂತಾ ಯುಎಸ್ ಕಾಂಗ್ರೆಸ್​ ಘೋಷಣೆ ಮಾಡಿದೆ. ಅಮೆರಿಕದ ಅಧ್ಯಕ್ಷೀಯ ಗದ್ದುಗೆ ಏರಲು 270 ಎಲೆಕ್ಟ್ರೋರಲ್ ಮತಗಳ ಅಗತ್ಯವಿದೆ.

ಇನ್ನು ಬೈಡನ್​ ಅವರನ್ನು ನೂತನ ಅಧ್ಯಕ್ಷರಾಗಿ ಅಧಿಕೃತವಾಗಿ ಘೋಷಣೆಗೂ ಮುನ್ನ ಟ್ರಂಪ್ ಬೆಂಬಲಿಗರು ವಾಷಿಂಗ್ಟನ್​ನ ಕ್ಯಾಪಿಟಲ್ ಬಲ್ಡಿಂಗ್​ಗೆ ಮುತ್ತಿಗೆ ಹಾಕಿ, ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ. ಈ ಘಟನೆಯಲ್ಲಿ ಒಟ್ಟು ನಾಲ್ವರು ಸಾವನ್ನಪ್ಪಿದ್ದಾರೆ. ಕ್ಯಾಪಿಟಲ್​ ಬಿಲ್ಡಿಂಗ್​ನಲ್ಲಿ ಜನಪ್ರತಿನಿಧಿಗಳು ಸಭೆ ಸೇರಿ ಚುನಾವಣೆಯ ಫಲಿತಾಂಶವನ್ನು ದೃಢೀಕರಿಸುವ ಪ್ರಕ್ರಿಯೆ ನಡೆಯುತ್ತಿತ್ತು. ಈ ವೇಳೆ ಟ್ರಂಪ್ ಬೆಂಬಲಿಗರು ಪೊಲೀಸರೊಂದಿಗೆ ಜಟಾಪಟಿ ನಡೆಸಿ, ಬ್ಯಾರಿಕೇಡ್​ಗಳನ್ನ ತಳ್ಳಿ, ಕ್ಯಾಪಿಟಲ್ ಬಿಲ್ಡಿಂಗ್​​ಗೆ ನುಗ್ಗಿದ್ದರು.

ಘರ್ಷಣೆ, ಹಿಂಸಾಚಾರದಲ್ಲಿ ಭಾಗಿಯಾದ 50ಕ್ಕೂ ಅಧಿಕ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 2020ರ ನವೆಂಬರ್ 3ರ ಚುನಾವಣೆಯಲ್ಲಿ ಟ್ರಂಪ್ ಪರಾಜಯ ಒಪ್ಪಿಕೊಳ್ಳದ ಬೆಂಬಲಿಗರು ಪ್ರತಿಭಟನೆ ನಡೆಸಿ ಹಿಂಸಾಚಾರಕ್ಕೆ ಮುಂದಾಗಿದ್ದರು. ಪ್ರತಿಭಟನಾನಿರತ ಮಹಿಳೆಯೊಬ್ಬರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದ್ದು, ಉಳಿದವರು ಹಿಂಸಾಚಾರದಲ್ಲಿ ಗಾಯಗೊಂಡು ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.

- Advertisement -
spot_img

Latest News

error: Content is protected !!