Wednesday, June 3, 2026
Homeಕರಾವಳಿಉಪ್ಪಿನಂಗಡಿ: ಮರ ಕಡಿಯಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ಯುವಕ

ಉಪ್ಪಿನಂಗಡಿ: ಮರ ಕಡಿಯಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ಯುವಕ

- Advertisement -
- Advertisement -

ಉಪ್ಪಿನಂಗಡಿ: ಮರದ ರೆಂಬೆ ಕತ್ತರಿಸಲು ಹೋಗಿ ವ್ಯಕ್ತಿಯೊಬ್ಬ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆ ಉಪ್ಪಿನಂಗಡಿ ಸಮೀಪದ ಗೋಳಿತ್ತೊಟ್ಟು ಎಂಬಲ್ಲಿ ನಡೆದಿದೆ. ಕೊಣಾಲು ಗ್ರಾಮದ ಕೋಲ್ಪೆ ದರ್ಖಾಸು ಎಂಬಲ್ಲಿ ಈ ದಾರುಣ ಘಟನೆ ನಡೆದಿದೆ.

ದರ್ಖಾಸು ನಿವಾಸಿ ಅಬ್ಬಾಸ್ ಎಂಬವರ ಪುತ್ರ ಇಸ್ಮಾಯಿಲ್ ಮೃತಪಟ್ಟ ದುರ್ದೈವಿ.

ಮೃತಪಟ್ಟ ಇಸ್ಮಾಯಿಲ್ ಗೋಳಿತ್ತೊಟ್ಟು ಗ್ರಾಮದ ಅಂಬುಡೇಲು ಎಂಬಲ್ಲಿ ಮಾವಿನ ಮರದ ಗೆಲ್ಲು ಕಡಿಯುತ್ತಿದ್ದ ಸಂದರ್ಭದಲ್ಲಿ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ಸಮೀಪದ ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಗೆ ಕರೆದೊಯ್ಯಲಾದರೂ ದಾರಿ ಮದ್ಯೆಯೇ ಸಾವನ್ನಪ್ಪಿದ್ದಾರೆ.

- Advertisement -

Latest News

error: Content is protected !!