Wednesday, August 12, 2026
Homeಕರಾವಳಿಮಂಗಳೂರುಉಪ್ಪಿನಂಗಡಿ: ಕೊಕ್ಕಡದಲ್ಲಿ ಕಾರು ತಡೆದು ಹಲ್ಲೆ: ಐವರ ಬಂಧನ, ಚಾಲಕನ ವಿರುದ್ಧವೂ 'ಝೀರೋ ಎಫ್‌ಐಆರ್' ದಾಖಲು

ಉಪ್ಪಿನಂಗಡಿ: ಕೊಕ್ಕಡದಲ್ಲಿ ಕಾರು ತಡೆದು ಹಲ್ಲೆ: ಐವರ ಬಂಧನ, ಚಾಲಕನ ವಿರುದ್ಧವೂ ‘ಝೀರೋ ಎಫ್‌ಐಆರ್’ ದಾಖಲು

- Advertisement -
- Advertisement -

ಉಪ್ಪಿನಂಗಡಿ: ಅಪ್ರಾಪ್ತ ಬಾಲಕಿಯೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಘಟನೆ ಕೊಕ್ಕಡ ಕಾಪಿನಬಾಗಿಲು ಎಂಬಲ್ಲಿ ಸಂಭವಿಸಿದೆ. ಈ ಸಂಬಂಧ ಐವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಕಾರು ಚಾಲಕನ ವಿರುದ್ಧವೂ ಅಪಹರಣ ಪ್ರಕರಣ ದಾಖಲಾಗಿದೆ.

ಕಾರ್ಕಳ ಈದು ನಿವಾಸಿ ಶೈಕ್ ಮುಕ್ತಾರ್ (50) ನೀಡಿದ ದೂರಿನಂತೆ, ಅವರು ಆಗಸ್ಟ್ 11ರ ರಾತ್ರಿ ತಮ್ಮ ಪರಿಚಯಸ್ಥರ ಅಪ್ರಾಪ್ತ ಮಗಳನ್ನು ಕಾರಿನಲ್ಲಿ ಕರೆದುಕೊಂಡು ಹಾಸನ ಕಡೆಗೆ ತೆರಳುತ್ತಿದ್ದರು. ಈ ವೇಳೆ ಕೊಕ್ಕಡ ಕಾಪಿನಬಾಗಿಲಿನಲ್ಲಿ ಕಾರು ತಡೆದು ನಿಲ್ಲಿಸಿದ ಗುಂಪೊಂದು ಶೈಕ್ ಮುಕ್ತಾರ್ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದೆ. ಈ ದೂರಿನನ್ವಯ ಬೆಳ್ತಂಗಡಿಯ ಧನುಷ್ (23), ದಿನೇಶ್ (45), ಪೂರ್ಣಕ್ಷ ಬಿ (40), ಸೂರಜ್ (25) ಮತ್ತು ರಂಜಿತ್ ಬಂಡಾರಿ (29) ಅವರನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪ್ರತಿದೂರು: ಇದೇ ಘಟನೆಗೆ ಸಂಬಂಧಿಸಿದಂತೆ, ಶೈಕ್ ಮುಕ್ತಾರ್ ಅವರು ತಮ್ಮ ಮಗಳನ್ನು ಬಲವಂತವಾಗಿ ಕಾರಿನಲ್ಲಿ ಕುಳ್ಳಿರಿಸಿಕೊಂಡು ಅಪಹರಿಸುತ್ತಿದ್ದಾರೆ ಎಂದು ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಠಾಣೆಯಲ್ಲಿ ಶೈಕ್ ಮುಕ್ತಾರ್ ವಿರುದ್ಧ ‘ಝೀರೋ ಎಫ್‌ಐಆರ್’ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

- Advertisement -

Latest News

error: Content is protected !!