- Advertisement -
- Advertisement -
ಲಖನೌ : ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರ ತಂದೆ ಆನಂದ್ ಸಿಂಗ್ ಬಿಶ್ತ್ ಇಂದು ನಿಧನರಾಗಿದ್ದರು. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನಹೊಂದಿದ್ದರು. ಇಂತಹ ತಂದೆಯ ಅಂತ್ಯಕ್ರಿಯೆಗೆ ಲಾಕ್ ಡೌನ್ ಇರುವುದರಿಂದಾಗಿ, ಈ ನಿಯಮ ಮೀರಿ, ತಾವು ತಂದೆಯ ಅಂತ್ಯಕ್ರಿಯೆಗೂ ತೆರಳುವುದಿಲ್ಲ ಎಂಬುದಾಗಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಈ ಕುರಿತಂತೆ ಟ್ವಿಟ್ ಮಾಡಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ನಾನು ತಂದೆಯ ಅಂತ್ಯಕ್ರಿಯೆಗೆ ತೆರಳುವುದರಿಂದ ಜನಜಂಗುಳಿ ಏರ್ಪಡಬಹುದು. ಇದರಿಂದಾಗಿ ಲಾಕ್ ಡೌನ್ ನಿಯಮ ಉಲ್ಲಂಘಿಸಿದಂತೆ ಆಗುತ್ತದೆ. ಹೀಗಾಗೀ ನಾನು ನನ್ನ ತಂದೆಯ ಅಂತ್ಯಕ್ರಿಯೆಯಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿ ಪಾಲ್ಗೊಳ್ಳುವುದಿಲ್ಲ ಎಂಬಹುದಾಗಿ ಸ್ಪಷ್ಟ ಪಡಿಸಿದ್ದಾರೆ.
- Advertisement -