Sunday, June 7, 2026
HomeUncategorizedಮಂಗಳೂರು: ರಾ.ಹೆ. ಕಾಮಗಾರಿ ಅವಾಂತರ: ಎಡಪದವಿನಲ್ಲಿ ಮನೆ ಸುತ್ತ ಆವರಿಸಿದ ನೀರು

ಮಂಗಳೂರು: ರಾ.ಹೆ. ಕಾಮಗಾರಿ ಅವಾಂತರ: ಎಡಪದವಿನಲ್ಲಿ ಮನೆ ಸುತ್ತ ಆವರಿಸಿದ ನೀರು

- Advertisement -
- Advertisement -

ಮಂಗಳೂರು: ಎಡೆಬಿಡದೇ ಸುರಿದ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿಯಿಂದ ಮನೆಗೆ ಪ್ರವಾಹದ‌ ನೀರು ನುಗ್ಗಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರಿನ ತಾಲೂಕಿನ ಎಡಪದವಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ಹರಿಯಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಮನೆಗೆ ನೀರು ನುಗ್ಗಿದೆ.ಬಿಕರ್ನಕಟ್ಟೆಯಿಂದ ಸಾಣೂರು ವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು,
ಎಡಪದವು ಶ್ರೀನಿವಾಸ್ ಭಟ್ ಎಂಬವರ ಮನೆಯ ಸುತ್ತ ನೀರು ತುಂಬಿಕೊಂಡಿದೆ.ಮನೆ ಸುತ್ತಲೂ ನೀರು ತುಂಬಿರುವ ಕಾರಣ ಮನೆಯ ಸದಸ್ಯರು ಹೊರಗೆ ಬರುವುದಕ್ಕೂ ಕಷ್ಟ ಪಡುವಂತಾಗಿದೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಯಿಂದ ಮಳೆಗಾಲದಲ್ಲಿ ಜನರಿಗೆ ಸಮಸ್ಯೆಯಾಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಕೆಲವು ದಿನಗಳ ಹಿಂದಷ್ಟೇ ಸಂಸದರು ಅಧಿಕಾರಿಗಳ ಸಭೆ ಕರೆದು ಸೂಚಿಸಿದ್ದರು. ಆದರೂ ಕೂಡಾ ಸಮರ್ಪಕ ವ್ಯವಸ್ಥೆ ರೂಪಿಸದ ಕಾರಣ ಮಳೆಯಿಂದಾಗಿ ಜನರು ಸಂಕಷ್ಟ ಎದುರಿಸುವಂತಾಗಿದೆ.

- Advertisement -

Latest News

error: Content is protected !!