Friday, June 5, 2026
Homeಪ್ರಮುಖ-ಸುದ್ದಿಕೇಂದ್ರದಿಂದ 'ಅನ್ ಲಾಕ್ 5.0 ಮಾರ್ಗಸೂಚಿ' ರಿಲೀಸ್ ಅ.15 ರಿಂದ ಸಿನಿಮಾ ಥಿಯೇಟರ್ ಓಪನ್

ಕೇಂದ್ರದಿಂದ ‘ಅನ್ ಲಾಕ್ 5.0 ಮಾರ್ಗಸೂಚಿ’ ರಿಲೀಸ್ ಅ.15 ರಿಂದ ಸಿನಿಮಾ ಥಿಯೇಟರ್ ಓಪನ್

- Advertisement -
- Advertisement -

ನವದೆಹಲಿ : ಕೇಂದ್ರ ಗೃಹ ಸಚಿವಾಲಯ ಅಕ್ಟೋಬರ್ 1ರಿಂದ ಜಾರಿಗೆ ಬರುವ ‘ಅನ್ ಲಾಕ್ 5.0’ ಕುರಿತ ವಿವರವಾದ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಈ ಅನ್ ಲಾಕ್ 5.0 ಮಾರ್ಗಸೂಚಿಪ್ರಕಾರ, ಚಿತ್ರಮಂದಿರಗಳು, ಥಿಯೇಟರ್ ಗಳು ಮತ್ತು ಮಲ್ಟಿಪ್ಲೆಕ್ಸ್ ಗಳು ಅಕ್ಟೋಬರ್ 15 ರಿಂದ ತಮ್ಮ ಆಸನದ ಸಾಮರ್ಥ್ಯದ ಶೇಕಡಾ 50ರಷ್ಟು ಪ್ರೇಕ್ಷಕರನ್ನು ಹೊಂದಿರುವಂತೆ ಆಸನಗಳನ್ನು ವ್ಯವಸ್ಥೆ ಮಾತ್ರ ಭರ್ತಿ ಮಾಡಿಕೊಂಡು ತೆರೆಯಲು ಅನುಮತಿಯನ್ನು ನೀಡಲಾಗಿದೆ. ಅಲ್ಲದೇ ಕೆಲ ಷರತ್ತುಗಳನ್ನು ಕೂಡ ವಿಧಿಸಿದೆ.

ಇನ್ನೂ ಶಾಲೆಗಳು ಮತ್ತು ಕೋಚಿಂಗ್ ಸಂಸ್ಥೆಗಳನ್ನು ಪುನಃ ತೆರೆಯುವುದಕ್ಕೆ ಸಂಬಂಧಿಸಿದಂತೆ, 2020ರ ಅಕ್ಟೋಬರ್ 15ರ ನಂತರ ರಾಜ್ಯ ಮತ್ತು ಕೇಂದ್ರಾಡಳಿತ ಸರ್ಕಾರಗಳಿಗೆ ತಿಳಿಸಲಾಗುತ್ತದೆ ಎಂಬುದಾಗಿ ತಿಳಿಸಿದ್ದು, ಅದಕ್ಕಾಗಿ ನೂತನ ಮಾರ್ಗಸೂಚಿ ಬಿಡುಗಡೆ ಮಾಡುವುದಾಗಿಯೂ ಅನ್ ಲಾಕ್ 5.0 ಮಾರ್ಗಸೂಚಿಯಲ್ಲಿ ತಿಳಿಸಿದೆ.

- Advertisement -

Latest News

error: Content is protected !!