Friday, June 5, 2026
HomeUncategorizedಅಕ್ಟೋಬರ್ ತಿಂಗಳಲ್ಲಿ ಬ್ಯಾಂಕ್ ಕಡೆ ಹೋಗೋರು ಸ್ವಲ್ಪ ಇಲ್ಲಿ ಗಮನಿಸಿ...

ಅಕ್ಟೋಬರ್ ತಿಂಗಳಲ್ಲಿ ಬ್ಯಾಂಕ್ ಕಡೆ ಹೋಗೋರು ಸ್ವಲ್ಪ ಇಲ್ಲಿ ಗಮನಿಸಿ…

- Advertisement -
- Advertisement -

ಬೆಂಗಳೂರು : ಅಯ್ಯೋ! ಈ ತಿಂಗಳು ನಾನ್ ಸಿಕ್ಕಾಪಟ್ಟೆ ಬ್ಯುಸಿಯಾಗಿ ಬಿಟ್ಟೆ ಮುಂದಿನ ತಿಂಗಳು ಪಕ್ಕಾ ಬ್ಯಾಂಕ್ ಕೆಲಸಗಳನ್ನು ಮುಗಿಸ್ಕೊಂಡು ಬಿಡ್ಬೇಕು ಅಂತಾ ಪ್ಲ್ಯಾನ್ ಮಾಡ್ಕೊಂಡಿರೋ ಮಂದಿ ಸ್ವಲ್ಪ ಇಲ್ಲಿ ಗಮನ ಕೊಡ್ಲೇ ಬೇಕು.

ಹೌದು.. ಮುಂದಿನ ತಿಂಗಳು ನೀವು ಸರಿಯಾಗಿ ವಿಚಾರಿಸದೇ ಬ್ಯಾಂಕ್ ಕಡೆ ಮುಖ ಮಾಡಿದ್ರೆ ನಿಮ್ಮ ಕೆಲಸಗಳು ಆಗೋದು ಡೌಟೇ.. ಅರೇ! ಯಾಕೆ ಅಂತೀರಾ? 2020ರ ಅಕ್ಟೋಬರ್‌ ತಿಂಗಳಲ್ಲಿ 14 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜಾ ಇರಲಿದೆ. ಸಾರ್ವಜನಿಕ ಬ್ಯಾಂಕ್‌ ಅಥವಾ ಖಾಸಗಿ ಬ್ಯಾಂಕ್‌ಗಳಿಗೆ ಇವುಗಳು ಅನ್ವಯವಾಗುತ್ತದೆ. ಇವುಗಳಲ್ಲಿ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮತ್ತು ಭಾನುವಾರಗಳು ಸಹ ಸೇರಿವೆ. ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ ಮಾರ್ಗಸೂಚಿಯ ಪ್ರಕಾರ, ಎಲ್ಲ ಸಾರ್ವಜನಿಕ ರಜಾದಿನಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. 

ಆರ್‌ಬಿಐ ವೆಬ್‌ಸೈಟ್‌ ಪ್ರಕಾರ, ಅಕ್ಟೋಬರ್‌ 2020ರಲ್ಲಿ ಬ್ಯಾಂಕ್‌ ರಜಾದಿನಗಳಲ್ಲಿ ಮಹಾತ್ಮ ಗಾಂಧಿ ಜಯಂತಿ, ಮಹಾಸಪ್ತಮಿ, ದಸರಾ, ಈದ್‌-ಮಿಲಾಡ್‌ ಮುಂತಾದ ವಿವಿಧ ಹಬ್ಬಗಳು ಸೇರಿವೆ. ಬ್ಯಾಂಕ್‌ ರಜಾದಿನಗಳಲ್ಲಿ ಎಟಿಎಂಗಳು ಸಹ ಹಣವನ್ನು ವಿತರಿಸದಿರಬಹುದು ಎಂದು ಹೇಳಿದೆ. 

ಅಕ್ಟೋಬರ್ ತಿಂಗಳ ಬ್ಯಾಂಕ್ ರಜಾದ ಮಾಹಿತಿ ಇಲ್ಲಿದೆ :

ಅಕ್ಟೋಬರ್‌ 2: ಶುಕ್ರವಾರ (ಗಾಂಧೀ ಜಯಂತಿ)
ಅಕ್ಟೋಬರ್‌ 4: ರವಿವಾರ- (ಸಾರ್ವಜನಿಕ ರಜಾ)
ಅಕ್ಟೋಬರ್‌ 8: ಗುರುವಾರ- ಚೆಲ್ಲಂ (ಪ್ರಾದೇಶಿಕ ರಜಾ)
ಅಕ್ಟೋಬರ್‌ 10: ಶನಿವಾರ- (ಎರಡನೇ ಶನಿವಾರ)
ಅಕ್ಟೋಬರ್‌ 11: ರವಿವಾರ- (ಸಾರ್ವಜನಿಕ ರಜಾ)
ಅಕ್ಟೋಬರ್‌ 17: ಶನಿವಾರ- ಅಸ್ಸಾಂನಲ್ಲಿ ಕತಿ ಬಿಹು
ಅಕ್ಟೋಬರ್‌ 18: ರವಿವಾರ (ಸಾರ್ವಜನಿಕ ರಜಾ)
ಅಕ್ಟೋಬರ್‌ 23: ಶುಕ್ರವಾರ- ಮಹಾಸಪ್ತಮಿ (ಪ್ರಾದೇಶಿಕ ರಜಾ)
ಅಕ್ಟೋಬರ್‌ 24: ಶನಿವಾರ- ಮಹಾಷ್ಟಮಿ (ಪ್ರಾದೇಶಿಕ ರಜಾ)
ಅಕ್ಟೋಬರ್‌ 25: ರವಿವಾರ- (ಸಾರ್ವಜನಿಕ ರಜಾ)
ಅಕ್ಟೋಬರ್‌ 26: ಸೋಮವಾರ- ವಿಜಯ ದಶಮಿ
ಅಕ್ಟೋಬರ್‌ 29: ಗುರುವಾರ- ಮಿಲಾದ್‌ ಇ ಶರೀಫ್ (ಪ್ರಾದೇಶಿಕ ರಜಾ)
ಅಕ್ಟೋಬರ್‌ 30: ಶುಕ್ರವಾರ- ಈದ್‌ ಮಿಲಾದ್‌
ಅಕ್ಟೋಬರ್‌ 31: ಶನಿವಾರ- ಮಹರ್ಷಿ ವಾಲ್ಮೀಕಿ, ಸರ್ದಾರ್‌ ಪಟೇಲ್‌ ಜಯಂತಿ (ಪ್ರಾದೇಶಿಕ ರಜಾ)

- Advertisement -

Latest News

error: Content is protected !!