Wednesday, June 3, 2026
Homeತಾಜಾ ಸುದ್ದಿಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ತಡೆಯದೇ ವೀಡಿಯೋ ರೆಕಾರ್ಡ್ ಮಾಡಿದ ಭೂಪರು!

ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ತಡೆಯದೇ ವೀಡಿಯೋ ರೆಕಾರ್ಡ್ ಮಾಡಿದ ಭೂಪರು!

- Advertisement -
- Advertisement -

ಹೊಸಪೇಟೆ: ವ್ಯಕ್ತಿಯೊಬ್ಬ ನೇಣು ಹಾಕಿಕೊಳ್ಳುತ್ತಿದ್ದ ವೇಳೆ ಅತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸುವ ಬದಲು ವೀಡಿಯೋ ರೆಕಾರ್ಡ್ ಮಾಡಿದ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.

ಹೊಸಪೇಟೆ ತಾಲೂಕಿನ ಹನುಮನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಮಂಜುನಾಥ್ (25) ಎಂಬ ವ್ಯಕ್ತಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿನ ವಿದ್ಯುತ್ ಕಂಬಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹನುಮನಹಳ್ಳಿಯ ಫ್ಲೈಓವರ್ ಮೇಲಿನ‌ ವಿದ್ಯುತ್ ಕಂಬಕ್ಕೆ ನೇಣು ಹಾಕಿಕೊಂಡಿದ್ದು, ತಾನೇ ಉಟ್ಟಿದ್ದ ಲುಂಗಿಯಿಂದ ನೇಣು ಬಿಗಿದುಕೊಂಡು ಮಂಜುನಾಥ್ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ತಡೆಯಲು ಮುಂದಾಗದೇ ಪೂರ್ತಿ ವೀಡಿಯೋ ರೆಕಾರ್ಡ್ ಮಾಡಲಾಗಿದೆ.

ಅನಾಮಧೇಯ ವ್ಯಕ್ತಿಯಿಂದ ವೀಡಿಯೋ ರೆಕಾರ್ಡ್ ಮಾಡಲ್ಪಟ್ಟಿದ್ದು, ಘಟನೆಯ ಕುರಿತು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!