Sunday, August 30, 2026
Homeತಾಜಾ ಸುದ್ದಿಅಪ್ರಾಪ್ತ ಬಾಲಕನಿಂದ 9 ಲಕ್ಷ ರೂಪಾಯಿ ದೋಚಿದ ಅನಾಮಿಕ

ಅಪ್ರಾಪ್ತ ಬಾಲಕನಿಂದ 9 ಲಕ್ಷ ರೂಪಾಯಿ ದೋಚಿದ ಅನಾಮಿಕ

- Advertisement -
- Advertisement -

ಮುಂಬೈ:  ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಆ್ಯಪ್ ಇನ್‍ಸ್ಟಾಲ್ ಮಾಡಲು ಹೇಳಿ 9 ಲಕ್ಷ ದೋಚಿದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಅಶೋಕ್ ಮನ್ವಾಟೆ ಹಣ ಕಳೆದುಕೊಂಡ ವ್ಯಕ್ತಿ. ಅಶೋಕ್ ಅವರಿಗೆ ಬಂದ ಅನಾಮಧೇಯ ಕರೆಯನ್ನು ಅವರ 15 ವರ್ಷದ ಮಗ ಸ್ವೀಕರಿಸಿದ್ದಾನೆ. ಈ ವೇಳೆ ಕರೆ ಮಾಡಿದ ವ್ಯಕ್ತಿ ಮೊದಲು ತನ್ನನ್ನು ತಾನು ಪರಿಚಯಿಸಿಕೊಂಡಿದ್ದಾನೆ.

ತಾನು ಡಿಜಿಟಲ್ ಹಣ ಪಾವತಿ ಕಂಪನಿಯ ಗ್ರಾಹಕ ಆರೈಕೆಯ ಕಾರ್ಯನಿರ್ವಾಹಕ ಎಂದು ಹೇಳಿಕೊಂಡು, ನಿಮ್ಮ ಮೊಬೈಲ್ ನಲ್ಲಿ ಆ್ಯಪ್ ಡೌನ್ ಲೋಡ್ ಮಾಡಿ ಅದಕ್ಕೆ ಬ್ಯಾಂಕ್ ಅಕೌಂಟ್ ಲಿಂಕ್ ಮಾಡುವಂತೆಯೂ ಹೇಳಿದ್ದಾನೆ. ಅಲ್ಲದೆ ಕ್ರೆಡಿಟ್ ಮಿತಿ ಹೆಚ್ಚಿಸುವುದಾಗಿ ತಿಳಿಸಿದ್ದಾನೆ. ಆತ ಹೇಳಿದ ಕೂಡಲೇ ಬಾಲಕ ತಂದೆಯ ಮೊಬೈಲ್ ನಲ್ಲಿ ಆ್ಯಪ್ ಇನ್ ಸ್ಟಾಲ್ ಮಾಡಿಯೇ ಬಿಟ್ಟಿದ್ದಾನೆ.

ಬಾಲಕ ಆ್ಯಪ್ ಡೌನ್ ಲೋಡ್ ಮಾಡಿದ ಕೂಡಲೇ ಕರೆ ಮಾಡಿದ ವ್ಯಕ್ತಿ, ಬಾಲಕನ ತಂದೆಯ ಬ್ಯಾಂಕ್ ಅಕೌಂಟಿನಿಂದ 8.95 ಲಕ್ಷ ಎಗರಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.ಘಟನೆ ಸಂಬಂಧ ಅಶೋಕ್ ನೀಡಿರುವ ದೂರು ಸ್ವೀಕರಿಸಿರುವ ಪೊಲೀಸರು ಅನಾಮಿಕನ ವಿರುದ್ಧ ಐಪಿಸಿ ಸೆಕ್ಷನ್ 420(ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!