- Advertisement -
- Advertisement -
ಉಡುಪಿ: ಉದ್ಯಾವರ ಬೊಲ್ಲೆ ಪ್ರದೇಶದ ರೈಲ್ವೇ ಹಳಿಯಲ್ಲಿ ಅಪರಿಚಿತ ಶವ ಪತ್ತೆಯಾಗಿದ್ದು, ರೈಲು ಢಿಕ್ಕಿ ಹೊಡೆದ ಸ್ಥಿತಿಯಲ್ಲಿ ದೇಹ ಛಿದ್ರಗೊಂಡಿದೆ.
ಮಾಹಿತಿ ತಿಳಿದ ಕಾಪು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಅಲ್ಲದೆ ಸಮಾಜ ಸೇವಕ ಸೂರಿ ಶೆಟ್ಟಿ ಮತ್ತು ಅವರ ಆಂಬ್ಯುಲೆನ್ಸ್ ಚಾಲಕ ನಾಗರಾಜ್ ಸಹಕಾರದಿಂದ ಶವವನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.
ಸದ್ಯ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -