Thursday, June 4, 2026
Homeಕರಾವಳಿಬಂಟ್ವಾಳ: ಕೆಲಸದಿಂದ ಮರಳುತ್ತಿದ್ದ ಯುವಕನ ಮೇಲೆ ಅಪರಿಚಿತರಿಂದ ಮಾರಣಾಂತಿಕ ಹಲ್ಲೆ

ಬಂಟ್ವಾಳ: ಕೆಲಸದಿಂದ ಮರಳುತ್ತಿದ್ದ ಯುವಕನ ಮೇಲೆ ಅಪರಿಚಿತರಿಂದ ಮಾರಣಾಂತಿಕ ಹಲ್ಲೆ

- Advertisement -
- Advertisement -

Bಬಂಟ್ವಾಳ: ಕೆಲಸದಿಂದ ಮರಳುತ್ತಿದ್ದ ಯುವಕನ ಮೇಲೆ ಅಪರಿಚಿತರು ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಬಂಟ್ವಾಳ ತಾಲೂಕಿನ ಮಾರಿಪಳ್ಳ ಕಡೆಗೋಳಿ ಎಂಬಲ್ಲಿ ನಡೆದಿದೆ.


ತುಂಬೆ ರೊಟ್ಟಿಗುಡ್ಡೆ ನಿವಾಸಿ ನಫೀಲ್ (17) ಎಂಬ ಯುವತಕ ನಿನ್ನೆ ರಾತ್ರಿ ಕೆಲಸ ಬಿಟ್ಟು ಮನೆಗೆ ಮರಳುತ್ತಿದ್ದ ವೇಳೆ ಕಡೆಗೋಳಿ ಎಂಬಲ್ಲಿ ಫೋನ್ ಬಂದ ಕಾರಣ ಬೈಕ್ ನಿಲ್ಲಿಸಿ ಮಾತನಾಡುತ್ತಿದ್ದರು, ಈ ವೇಳೆ ಅಪರಿಚಿತರು ಬಂದು ಹಲ್ಲೆ ಮಾಡಿ ನಿನ್ನನ್ನು ಜೀವ ಸಹಿತಿ ಬಿಡೋದಿಲ್ಲ ಅಂತಾ ಬೆದರಿಕೆ ಹಾಕಿದ್ದಾರೆಂದು ನಫೀಲ್ ಹೇಳಿದ್ದಾರೆ.
ಅಪರಿಚಿತರು ಮರದ ತುಂಡಿದ ಮುಖ, ಕೆನ್ನೆ, ಎದೆ, ತಲೆ, ಕುತ್ತಿಗೆ ಭಾಗಕ್ಕೆ ಹೊಡೆದಿದ್ದಾರೆ ಎಂಗು ಅವರು ದೂರಿನಲ್ಲಿ ತಿಳಿಸಿದ್ದಾರೆ. ಹಲ್ಲೆಗೊಳಗಾದ ನಫೀಲ್ ನನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

- Advertisement -

Latest News

error: Content is protected !!