Friday, June 5, 2026
Homeತಾಜಾ ಸುದ್ದಿಭೀಕರ ಅಪಘಾತಕ್ಕೊಳಗಾದ ಮಾಜಿ ಸಚಿವೆ ಉಮಾಶ್ರೀ ಕಾರು-ಇಬ್ಬರು ಸ್ಥಳದಲ್ಲೇ ಸಾವು

ಭೀಕರ ಅಪಘಾತಕ್ಕೊಳಗಾದ ಮಾಜಿ ಸಚಿವೆ ಉಮಾಶ್ರೀ ಕಾರು-ಇಬ್ಬರು ಸ್ಥಳದಲ್ಲೇ ಸಾವು

- Advertisement -
- Advertisement -

ಹುಬ್ಬಳ್ಳಿ: ಇಲ್ಲಿನ ಬಂಡಿವಾಡ ಬಳಿ ಗದಗ-ಹುಬ್ಬಳ್ಳಿ ರಸ್ತೆಯಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಇನ್ನೋವಾ ಮತ್ತು ಬಲೆನೋ ಕಾರು ಮುಖಾಮುಖಿ ಡಿಕ್ಕಿಯಾಗಿದ್ದು ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ.

ಪಘಾತಕ್ಕೀಡಾದ ಕಾರು ನಟಿ, ಮಾಜಿ ಸಚಿವೆ ಉಮಾಶ್ರೀ ಅವರಿಗೆ ಸೇರಿದ್ದು ಎನ್ನಲಾಗಿದೆ. ಗದಗನಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಇನ್ನೋವಾ ಕಾರು ಮತ್ತು ಹುಬ್ಬಳ್ಳಿಯಿಂದ ಗದಗನತ್ತ ಹೊರಟಿದ್ದ ಬಲೆನೋ ಕಾರಿನ ನಡುವೆ ಶುಕ್ರವಾರ ರಾತ್ರಿ ಡಿಕ್ಕಿಯಾಗಿದೆ.

ಅಪಘಾತದಲ್ಲಿ ಇಬ್ಬರಿಗೆ ತೀವ್ರ ಗಾಯಗಳಾಗಿವೆ ಇವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

- Advertisement -

Latest News

error: Content is protected !!