Thursday, June 4, 2026
Homeತಾಜಾ ಸುದ್ದಿಪಬ್ ಜೀ ಗೇಮ್ ಮರಳಿಬರುತ್ತಾ? ಮೊಬೈಲ್ ಇಂಡಿಯಾ ಘೋಷಣೆ ಕುರಿತು ಭಾರತ ಸರ್ಕಾರದ ನಿಲುವೇನು?

ಪಬ್ ಜೀ ಗೇಮ್ ಮರಳಿಬರುತ್ತಾ? ಮೊಬೈಲ್ ಇಂಡಿಯಾ ಘೋಷಣೆ ಕುರಿತು ಭಾರತ ಸರ್ಕಾರದ ನಿಲುವೇನು?

- Advertisement -
- Advertisement -

ನವದೆಹಲಿ:ಭಾರತದಲ್ಲಿ ಬ್ಯಾನ್ ಆಗಿದ್ದ ಪಬ್ ಜೀ ಗೇಮ್ ಈಗ ಸಿಹಿಸುದ್ದಿಯೊಂದನ್ನು ನೀಡಿದೆ. ಜನಪ್ರಿಯ ಪಬ್ ಜೀ ಗೇಮ್ ಶೀಘ್ರದಲ್ಲೇ ಕಮ್ ಬ್ಯಾಕ್ ಮಾಡುವ ಕುರಿತು ಮೊಬೈಲ್ ಇಂಡಿಯಾ ತನ್ನ ಮರುಬಿಡುಗಡೆಯನ್ನು ಘೋಷಿಸಿದೆ. ಆದರೆ ಈ ಮರುಬಿಡುಗಡೆಯ ಬಗ್ಗೆ ಭಾರತ ಸರ್ಕಾರದಿಂದ ಇನ್ನೂ ಯಾವುದೇ ದೃಢೀಕರಣ ಬಂದಿಲ್ಲ.

ಈ ಹಿಂದೆ ರಾಷ್ಟ್ರೀಯ ಭದ್ರತಾ ಆತಂಕಗಳನ್ನು ಉಲ್ಲೇಖಿಸಿ ಅದರ ಆಧಾರದ ಮೇಲೆ ಭಾರತ ಸರ್ಕಾರ ಪಬ್ ಜೀ ಗೇಮ್ ನಿಷೇಧಿಸಿತ್ತು. ಭದ್ರತಾ ಕಾರಣಗಳಿಂದಾಗಿ ಸೆಪ್ಟೆಂಬರ್ ನಲ್ಲಿ ಭಾರತದಲ್ಲಿ ನಿಷೇಧಕ್ಕೊಳಗಾದ ನಂತರ ಪಬ್ ಜೀ ಕಮ್ ಬ್ಯಾಕ್ ಮಾಡಲು ಸಜ್ಜಾಗಿದೆ. ಗೇಮ್ ಡೆವಲಪರ್ ಗಳು ಬಹಿರಂಗಪಡಿಸಿರುವ ಪ್ರಕಾರ, ಭಾರತೀಯ ಮಾರುಕಟ್ಟೆಯಲ್ಲಿ ನಿರ್ದಿಷ್ಟವಾಗಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿಕುಂಡು ಪಬ್ ಜೀ ದೇಶದ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂದು ವರದಿ ತಿಳಿಸಿದೆ.

- Advertisement -

Latest News

error: Content is protected !!