Thursday, June 4, 2026
Homeಕರಾವಳಿಮಂಗಳೂರು; ಉಳ್ಳಾಲದಲ್ಲಿ ನೇತ್ರಾವತಿ ನದಿ ಬಳಿ ಪತ್ತೆಯಾದ ಮೃತದೇಹದ ಗುರುತು ಪತ್ತೆ

ಮಂಗಳೂರು; ಉಳ್ಳಾಲದಲ್ಲಿ ನೇತ್ರಾವತಿ ನದಿ ಬಳಿ ಪತ್ತೆಯಾದ ಮೃತದೇಹದ ಗುರುತು ಪತ್ತೆ

- Advertisement -
- Advertisement -

ಮಂಗಳೂರು; ಉಳ್ಳಾಲದಲ್ಲಿ ನೇತ್ರಾವತಿ ನದಿ ಬಳಿ ಪತ್ತೆಯಾದ ಮೃತದೇಹದ ಗುರುತು ಪತ್ತೆಯಾಗಿದೆ. ಹಾಸನ ಜಿಲ್ಲೆಯ ಬೇಲೂರು ನಿವಾಸಿ ಮೊಹಮ್ಮದ್ ಝಾಕಿರ್ (50) ಮೃತ ದುರ್ದೈವಿ. ಉಳ್ಳಾಲ ಠಾಣೆಗೆ ಆಗಮಿಸಿದ ಮನೆಮಂದಿ ಗುರುತು ಪತ್ತೆ ಹಚ್ಚಿದ್ದಾರೆ.

ಕೆಲ ತಿಂಗಳುಗಳಿಂದ ಅನಾರೋಗ್ಯದಿಂದಿದ್ದ ಝಾಕೀರ್ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುತ್ತಿದ್ದರು. ಎರಡು ದಿನಗಳ ಹಿಂದೆಯೂ ಊರುಬಿಟ್ಟು ಔಷಧಿಗೆಂದು ಬಂದಿದ್ದವರು ಬಳಿಕ ನಾಪತ್ತೆಯಾಗಿದ್ದರು.

ಈ ಬಗ್ಗೆ ಮನೆಮಂದಿ ಎಲ್ಲೆಡೆ ಎರಡು ದಿನಗಳ ಕಾಲ ವಿಚಾರಿಸಿದ್ದರು. ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಮೃತದೇಹದ ಫೋಟೊ ಕಂಡ ಮನೆಮಂದಿ ಉಳ್ಳಾಲ ಠಾಣೆಗೆ ಇಂದು ಆಗಮಿಸಿ ಮೃತದೇಹದದ ಗುರುತು ಪತ್ತೆಹಚ್ಚಿದ್ದಾರೆ.ಮೃತರು ಅಸೌಖ್ಯದಿಂದ ನೊಂದು ಆತ್ಮಹತ್ಯೆಗೈದಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!