Friday, June 5, 2026
Homeಅಪರಾಧಉಜಿರೆ: ವಿದ್ಯುತ್ ಶಾಕ್ ಹೊಡೆದು ಕಾರ್ಮಿಕ ಗಂಭೀರ , ಆಸ್ಪತ್ರೆಗೆ ದಾಖಲು

ಉಜಿರೆ: ವಿದ್ಯುತ್ ಶಾಕ್ ಹೊಡೆದು ಕಾರ್ಮಿಕ ಗಂಭೀರ , ಆಸ್ಪತ್ರೆಗೆ ದಾಖಲು

- Advertisement -
- Advertisement -

ಬೆಳ್ತಂಗಡಿ : ಉಜಿರೆ ಎಸ್.ಡಿ.ಎಮ್ ಕಾಲೇಜ್ ರಸ್ತೆ ಅಭಿವೃದ್ಧಿ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಬದಿಯ ವಿದ್ಯುತ್ ಕಂಬಗಳನ್ನು ತೆರವುಗೊಳಿಸುತ್ತಿರುವ ಕಾಮಗಾರಿ ನಡೆಯುತಿದ್ದು ಇದೇ ವೇಳೆ ವಿದ್ಯುತ್ ಲೈನ್ ಆಫ್ ಮಾಡಿದ್ದು ವಾಣಿಜ್ಯ ಬಳಕೆಯ ಇನ್ವಾಟರ್ ಅಥವಾ ಜನರೇಟರ್ ನಿಂದ ವಿದ್ಯುತ್ ಪ್ರವಹಿಸಿ ಗುತ್ತಿಗೆ ಕಂಪನಿಯ ನೌಕರನಾದ ಕೊಕ್ಕಡ ನಿವಾಸಿ ಆನಂದ ಅವರ ಮಗನಾದ ಮಿತಿಲೇಶ್ (28) ಕಂಬದಲ್ಲಿ ಅಸ್ವಸ್ಥಗೊಂಡ ಘಟನೆ ಇಂದು ಸಂಜೆ ನಡೆದಿದೆ.

ತಕ್ಷಣ ಗಾಯಾಳುವನ್ನು ಸ್ಥಳೀಯ ಬೆನಕ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಪಾಯದಿಂದ ಪಾರಾಗಿದ್ದು ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಆಸ್ಪತ್ರೆಯ ವೈದ್ಯರು ಮಹಾ ಎಕ್ಸ್‌ಪ್ರೆಸ್‌ ಗೆ ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!