Tuesday, April 30, 2024
Homeಕರಾವಳಿಬೀಳುವ ಹಂತದಲ್ಲಿದೆ ಉಜಿರೆ ಹಳೆಪೇಟೆ ಸರಕಾರಿ ಹಿ.ಪ್ರಾ.ಶಾಲೆ

ಬೀಳುವ ಹಂತದಲ್ಲಿದೆ ಉಜಿರೆ ಹಳೆಪೇಟೆ ಸರಕಾರಿ ಹಿ.ಪ್ರಾ.ಶಾಲೆ

spot_img
- Advertisement -
- Advertisement -

ಬೆಳ್ತಂಗಡಿ, : ಪಟ್ಟಣ ಅಭಿವೃದ್ಧಿಗೆ ಸ್ಮಾರ್ಟ್ ಸಿಟಿ, ರಸ್ತೆ, ರೈಲ್ವೆ ಮಾರ್ಗಕ್ಕೆ ಕೋಟ್ಯಾಂತರ ವ್ಯಯಿಸುತ್ತಿರುವ ಸರಕಾರ ಸುಶಿಕ್ಷಿತ ಸಾಮಜವನ್ನು ಕಟ್ಟುತ್ತಿರುವ ಸರಕಾರಿ ಶಾಲೆಗಳತ್ತ ಏಕೆ ಮುಖ ಮಾಡುತ್ತಿಲ್ಲ ಎಂಬ ಪ್ರಶ್ನೆ ಇಂದು ನಿನ್ನೆಯದಲ್ಲ. ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಹಳೆಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂಖ್ಯೆಯೂ ಇದೆ, ಅದಕ್ಕೆ ಪೂರಕ ಶಿಕ್ಷಕರ ಕೊರತೆಯಂತೂ ಇಲ್ಲ, ಆದರೆ ಶಾಲೆ ಶಿಥಿಲಾವಸ್ಥೆಗೆ ತಲುಪಿ ಬೀಳುವ ಸ್ಥಿತಿಯಲ್ಲಿದೆ.

ಹಳೆಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು 1979 ಮಾರ್ಚ್ 8 ರಂದು ಆರಂಭವಾಗಿರುವ ಶಾಲೆ 44 ವರ್ಷ ಪೂರೈಸಿದೆ. ಈ ಶಾಲೆಯಲ್ಲಿ 1 ರಿಂದ 7ನೇ ತರಗತಿವರಗೆ 124 ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಆದರೆ ಶಾಲೆಯ ಒಂದು ಪಾರ್ಶ್ವ ಕಳೆದ ಬೇಸಗೆ ರಜೆಯ ಅವಧಿಯಲ್ಲಿ ಕುಸಿದು ಬಿದ್ದಿದೆ. ಮಕ್ಕಳಿದ್ದಿದ್ದರೆ ಏನು ಗತಿ, ಕೆಲ ಸಮಯದವರೆಗೆ ಟರ್ಪಾಲು ಅಳವಡಿಸಿ ಹೇಗೋ ದಿನ ದೂಡಲಾಗಿತ್ತು. ಆದರೆ ಸೂಕ್ತ ನಿರ್ವಹಣೆ ಸಾಧ್ಯವಾಗದ ಹಿನ್ನೆಲೆ ಈಗ ಕೊಠಡಿಯನ್ನೇ ಮುಚ್ಚಲಾಗಿದೆ. ಸರಕಾರಿ ಶಾಲೆಗೆ ಮಕ್ಕಳು ಬರುತ್ತಿಲ್ಲ ಎಂದು ಬೊಬ್ಬಿಡುವ ವ್ಯವಸ್ಥೆಗೆ ಶಾಲೆಗಳ ಅಭಿವೃದ್ಧಿಗೆ ಅನುದಾನವಿಡಲು ಗರ ಬಡಿದಿದೆ. ಸಣ್ಣ ಪುಟಾಣಿಗಳು ಇರುವ ಶಾಲೆಯಲ್ಲಿ ಹೆಂಚು ಅಥವಾ ಅಡ್ಡಹಾಸು ಮುರಿದು ಬಿದ್ದರೆ ದೇವರಿಗೇ ಪ್ರೀತಿ. ಆದರೆ ಇದರ ಬಗ್ಗೆ ಶಿಕ್ಷಣ ಇಲಾಖೆಯಾಗಲಿ ಸರಕಾರವಾಗಲಿ ಚಿಂತಿಸುತ್ತಿಲ್ಲ. ಶಿಕ್ಷಣ ಇಲಾಖೆ ಚಿಂತಿಸಿದರೂ ಸರಕಾರ ಅನುದಾನ ನೀಡುತ್ತಿಲ್ಲ. ಸರಕಾರಿ ಶಾಲೆಗಳ ನಿರ್ವಹಣೆ, ಸೀಮೆ ಸುಣ್ಣ ತರಲು ಅನುದಾನವಿಲ್ಲದೆ ಶಿಕ್ಷಕರೇ ತರಿಸುವಂತಾಗಿದೆ. ಅದಕ್ಕಾಗಿ ಮಳೆಗಾಲದ ಅನುದಾನದಡಿ ಡಿಸಿಗೆ ಪತ್ರ ಬರೆದು ಮಳೆಹಾನಿಯಲ್ಲಿ ಶಾಲೆಗಳ ದುರಸ್ತಿ ಮಾಡುವ ಪರಿಸ್ಥಿತಿ ನಮ್ಮ ಲಜ್ಜೆಗೆಟ್ಟ ವ್ಯವಸ್ಥೆಯದ್ದಾಗಿದ ಪ್ರಸಕ್ತ ಈ ಶಾಲೆಯಲ್ಲಿ ನಾಲ್ವರು ಸರಕಾರಿ ಶಿಕ್ಷಕರು, ಇಬ್ಬರು ಗೌರವ ಶಿಕ್ಷಕರು, ಧರ್ಮಸ್ಥಳದ ವತಿಯಿಂದ ಜ್ಞಾನ ದೀಪದ ನೇಮಿಸಿದ ಓರ್ವ ಶಿಕ್ಷಕರು ಸೇರಿ ಒಟ್ಟು ೭ ಮಂದಿ ಶಿಕ್ಷಕರಿದ್ದಾರೆ. ಆದರೆ ಶಾಲೆ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಒಟ್ಟು ೭ ಕೊಠಡಿಗಳಿದ್ದು ಯಾವುದೇ ಸಮಯದಲ್ಲಿ ಬೀಳುವ ಸಾತೆಯಿದೆ. ಕುಸಿದು ಬಿದ್ದ ಕಟ್ಟಡದಲ್ಲಿ ಇದ್ದ ಕೊಠಡಿಯ ಮಕ್ಕಳನ್ನು ಶಿಕ್ಷಣ ಇಲಾಖೆಯ ಅನುಮತಿಯಿಂದ ಪುಸ್ತಕ ದಾಸ್ತಾನು ಕೊಠಡಿಗೆ ಸ್ಥಳಾಂತರಿಸಲಾಗಿದೆ.

ಪರಿಣಾಮ 4,5,6, 7ನೇ ತರಗತಿಯ ಮಕ್ಕಳಿಗೆ ಒಂದು ಬೆಂಚ್‌ನಲ್ಲಿ ನಾಲ್ಕು, ಐದು ಮಂದಿಯಂತೆ ಕೂರಿಸಿ ತರಗತಿ ನಡೆಸಲಾಗುತ್ತಿದೆ. ಶಾಲೆಯ ಇನ್ನೊಂದು ಗ ಕುಸಿಯುವ ಭೀತಿಯಲ್ಲಿರುವುದರಿಂದ ಶಾಲಾ ಶಿಕ್ಷಕರು ಈ ಕೊಠಡಿಯಲ್ಲಿ ಜೀವಯದಲ್ಲಿದ್ದಾರೆ. ಮುಖ್ಯೋಪಾಧ್ಯಾಯರ ಕೊಠಡಿಯೂ ಇಂದೋ, ನಾಳೆಯೋ ಎಂಬಂತಿದೆ. ಮಕ್ಕಳ ಜೀವ ರಕ್ಷಣೆಗೆ ಇದೀಗ ಶಿಕ್ಷಕರು ದಾನಿಗಳು- ಸಂಘ ಸಂಸ್ಥೆಗಳ ಮೊರೆ ಹೋಗಿದ್ದಾರೆ.

- Advertisement -
spot_img

Latest News

error: Content is protected !!