Saturday, June 6, 2026
Homeಕರಾವಳಿಉಡುಪಿಉಡುಪಿ; ಗೂಳಿ ಗುದ್ದಿ ಕೆರೆಗೆ ಬಿದ್ದು ಮಹಿಳೆ ಸಾವು

ಉಡುಪಿ; ಗೂಳಿ ಗುದ್ದಿ ಕೆರೆಗೆ ಬಿದ್ದು ಮಹಿಳೆ ಸಾವು

- Advertisement -
- Advertisement -

ಉಡುಪಿ: ಗೂಳಿಯೊಂದು ಗುದ್ದಿದ್ದರಿಂದ ಮಹಿಳೆಯೊಬ್ಬರು ಕೆರೆಗೆ ಬಿದ್ದು ಮೃತಪಟ್ಟ ಘಟನೆ ಕುಂದಾಪುರದ ಕೆಂಚನೂರು ಎಂಬಲ್ಲಿ ನಡೆದಿದೆ.

ಕರ್ಕುಂಜೆಯ ಗಿರಿಜಾ(42) ಮೃತ ದುರ್ದೈವಿ. ಕೆಂಚನೂರಿನ ಭಾಸ್ಕರ ಪೂಜಾರಿ ಎಂಬವರ ತೋಟದ ಕೆಲಸವನ್ನು ಮುಗಿಸಿ ವಾಪಾಸು ತಮ್ಮ ಮನೆಗೆ ಮಾವಿನಕೆರೆಯ ದಂಡೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದರು.ಈ ವೇಳೆ ಎದುರಿನಿಂದ ಬಂದ ಗೂಳಿಯೊಂದು ಗಿರಿಜಾ ಅವರನ್ನು ದೂಡಿ ಹಾಕಿತ್ತೆನ್ನಲಾಗಿದೆ. ಇದರ ಪರಿಣಾಮ ಆಯತಪ್ಪಿ ಮಾವಿನಕೆರೆಗೆ ಬಿದ್ದ ಗಿರಿಜಾ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!