- Advertisement -
![]()
- Advertisement -
ಉಡುಪಿ: ಬುರ್ಖಾ ಧರಿಸಿಕೊಂಡು ಮನೆಯೊಳಗೆ ಬಂದು ಮಹಿಳೆಯರು ಮಗು ಕಳ್ಳತನಕ್ಕೆ ಯತ್ನಿಸಿದ್ದಾರೆ ಎಂಬ ಆರೋಪ ಬೆಳಪು ಗ್ರಾಮದ ಜನತಾ ಕಾಲೋನಿ ಎಂಬಲ್ಲಿಂದ ಕೇಳಿ ಬಂದಿದೆ.
ಮೊಹಮ್ಮದ್ ಅಲಿ ಎಂಬವರ ಮನೆಗೆ ಇಬ್ಬರು ಬುರ್ಖಾ ಧರಿಸಿದ ಮಹಿಳೆಯರು ಬಂದು ನಮಗೆ ಶೌಚಾಲಯಕ್ಕೆ ಹೋಗಬೇಕು ಎಂದು ಹೇಳಿದ್ದು, ಅದರಲ್ಲಿ ಇನ್ನೊಬ್ಬಳು ಮಹಿಳೆ ಮನೆಯ ಒಳಗೆ ಹೋಗಿ ತೊಟ್ಟಿಲಲ್ಲಿ ಮಲಗಿದ್ದ ಮುಹಮ್ಮದಾಲಿಯ ತಮ್ಮನ ಮಗುವನ್ನು ಎತ್ತಿಕೊಂಡು ಓಡಿ ಹೋಗಲು ಪ್ರಯಸಿದರೆನ್ನಲಾಗಿದೆ. ಆಗ ಮನೆಯಲ್ಲಿದ್ದ ತಾಬೂರಿಸ್ ತಡೆದಾಗ ಆಕೆಯನ್ನು ದೂಡಿ, ಮಗುವನ್ನು ನೆಲದಲ್ಲಿ ಬಿಟ್ಟು ಇಬ್ಬರು ಪರಾರಿಯಾಗಿದ್ದಾರೆಂದು ಆರೋಪಿಸಲಾಗಿದೆ.
ಇದರಿಂದ ತಾಬೂರಿಸ್ಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಗುವಿನ ತಾಯಿ ಸೀಮಾ ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
- Advertisement -


