Wednesday, June 24, 2026
Homeಕರಾವಳಿಉಡುಪಿಉಡುಪಿ; ಅರ್ಧ ಗಂಟೆಗೂ ಹೆಚ್ಚು ಕಾಲ ಕಾಳಗ ನಡೆಸಿದ ಗೂಳಿಗಳು

ಉಡುಪಿ; ಅರ್ಧ ಗಂಟೆಗೂ ಹೆಚ್ಚು ಕಾಲ ಕಾಳಗ ನಡೆಸಿದ ಗೂಳಿಗಳು

- Advertisement -
- Advertisement -

ಉಡುಪಿ; ಅರ್ಧ ಗಂಟೆಗೂ ಹೆಚ್ಚು ಕಾಲ ಎರಡು ಗೂಳಿಗಳು ಕಾಳಗ ನಡೆಸಿದ ಘಟನೆ ಗಂಗೊಳ್ಳಿಯಲ್ಲಿ ನಡೆದಿದೆ.
ಗಂಗೊಳ್ಳಿಯ ಮ್ಯಾಂಗನೀಸ್‌ ರಸ್ತೆ ಸಮೀಪ ಮುಖ್ಯ ರಸ್ತೆಯಲ್ಲಿ ಗೂಳಿಗಳು ಕಾದಾಟ ನಡೆಸಿವೆ. ಪರಿಣಾಮ ವಾಹನ ಸವಾರರು ಹಾಗೂ ಪಾದಚಾರಿಗಳು ಆತಂಕಗೊಂಡು, ಕಾಳಗ ನೋಡುತ್ತಾ ಜನರು ರಸ್ತೆ ಬದಿಯಲ್ಲಿ ನಿಲ್ಲುವಂತಾಯಿತು.

ಬಳಿಕ ಪಂಪ್‌ಸೆಟ್‌ ಮೂಲಕ ನೀರು ಹಾಯಿಸಿ, ಪಟಾಕಿ ಸಿಡಿಸಿ ಗೂಳಿ ಕಾಳಗವನ್ನು ನಿಲ್ಲಿಸಲು ಸ್ಥಳೀಯರು ಪ್ರಯತ್ನಿಸಿದರು. ಇಷ್ಟಾದರೂ ಅವುಗಳನ್ನು ಬೇರ್ಪಡಿಸಲು ಸಾಧ್ಯವಾಗಲಿಲ್ಲ. ಸುಮಾರು ಅರ್ಧ ಗಂಟೆ ಬಳಿಕ ಒಂದು ಗೂಳಿ ಓಡಿ ಹೋಯಿತು. ಬಳಿಕ ಮತ್ತೊಂದು ಗೂಳಿ ಶಾಂತವಾಯಿತು ಎನ್ನಲಾಗಿದೆ.

- Advertisement -

Latest News

error: Content is protected !!