Tuesday, June 30, 2026
Homeಕರಾವಳಿಉಡುಪಿ; ಆಕಸ್ಮಿಕವಾಗಿ ಬಾವಿಗೆ ಬಿದ್ದ ಯುವತಿಯ ರಕ್ಷಣೆ

ಉಡುಪಿ; ಆಕಸ್ಮಿಕವಾಗಿ ಬಾವಿಗೆ ಬಿದ್ದ ಯುವತಿಯ ರಕ್ಷಣೆ

- Advertisement -
- Advertisement -

ಉಡುಪಿ: ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದ ಯುವತಿಯೊಬ್ಬಳನ್ನು ರಕ್ಷಣೆ ಮಾಡಿದ ಘಟನೆ ಉಡುಪಿ ಜಿಲ್ಲೆಯ ಬೈಲೂರಿನ ಬಡಗು ಬೆಟ್ಟು ಎಂಬಲ್ಲಿ ನಡೆದಿದೆ.


ನಿನ್ನೆ ಸಂಜೆ 6 ಗಂಟೆಯ ವೇಳೆಗೆ ಯುವತಿ ಮನೆಯ ಸಮೀಪ ಬಾವಿಯ ಸಮೀಪವಿದ್ದ ಪೇರಳೆ ಮರಕ್ಕೆ ಪೇರಳೆ ಹಣ್ಣು ಕೊಯ್ಯಲು ಹತ್ತಿದಾಗ ಕಾಲು ಜಾರಿ ಬಾವಿಗೆ ಬಿದ್ದಿದ್ದಾಳೆ. ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡಲೇ ಬಾವಿಗೆ ಬಿದ್ದ ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಯುವತಿಗೆ ಅಲ್ಪ ಸ್ವಲ್ಪ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

- Advertisement -

Latest News

error: Content is protected !!