Friday, June 2, 2023
Homeಕರಾವಳಿಉಡುಪಿಲಾಕ್‌ಡೌನ್ ಉಲ್ಲಂಘಿಸಿಯೂ ಉಡುಪಿಯಲ್ಲಿ ವಿವಾಹ: 11 ಮಂದಿ ವಿರುದ್ಧ ಕೇಸ್ ದಾಖಲು

ಲಾಕ್‌ಡೌನ್ ಉಲ್ಲಂಘಿಸಿಯೂ ಉಡುಪಿಯಲ್ಲಿ ವಿವಾಹ: 11 ಮಂದಿ ವಿರುದ್ಧ ಕೇಸ್ ದಾಖಲು

- Advertisement -
- Advertisement -

ಉಡುಪಿ, ಎ.19: ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನೀಡಿರುವ ಆದೇಶವನ್ನು ಉಲ್ಲಂಘಿಸಿ ಹಾಗೂ ಯಾವುದೇ ಅನುಮತಿ ಇಲ್ಲದೆ ಉಡುಪಿ ಜಿಲ್ಲೆಯ ಅಲೆವೂರು ಗ್ರಾಮದ ದುಗ್ಲಿಪದವು ಎಂಬಲ್ಲಿ ಇಂದು ನಡೆದ ವಿವಾಹ ಕಾರ್ಯಕ್ರಮಕ್ಕೆ ಸಂಬಂಧಿಸಿ 11 ಮಂದಿ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖಚಿತ ಮಾಹಿತಿಯಂತೆ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್, ಕಂದಾಯ ನಿರೀಕ್ಷಕ ಶ್ರೀನಿವಾಸ್ ಜೊತೆಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಮಂಚಿಯ ಯುವಕ ಮತ್ತು ಮಂಗಳೂರು ಬೋರುಗುಡ್ಡೆಯ ಯುವತಿಗೆ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ವಿವಾಹ ಕಾರ್ಯಕ್ರಮ ನಡೆಸುತ್ತಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದರಲ್ಲಿ ಹಲವು ಮಂದಿ ಭಾಗಿಯಾಗಿದ್ದು, ವಧು ವಿಧಿಬದ್ಧವಾದ ಅನುಮತಿಯನ್ನು ಪಡೆಯದೆ ದ.ಕ.ಜಿಲ್ಲೆಯಿಂದ ಉಡುಪಿ ಜಿಲ್ಲೆಗೆ ಬಂದಿರುವುದಾಗಿ ದೂರಲಾಗಿದೆ. ಈ ಬಗ್ಗೆ ತಹಶೀಲ್ದಾರ್ ನೀಡಿದ ದೂರಿನಂತೆ ವರ ಹಾಗೂ ಮಧು ಸಹಿತ ಒಟ್ಟು 11 ಮಂದಿ ವಿರುದ್ಧ ಐ.ಪಿ.ಸಿ 188, 270 ಜೊತೆಗೆ 149ರಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!