ಬಾಲಿವುಡ್ ನಟಿ ಮಲೈಕಾ ಅರೋರಾ ಮತ್ತು ನಟ ಅರ್ಜುನ್ ಕಪೂರ್ ಕಳೆದ ಎರಡು ವರ್ಷಗಳಿಂದ ಡೇಟಿಂಗ್ ನಲ್ಲಿದ್ದಾರೆ. ಇಬ್ಬರ ಮದುವೆ ಯಾವಾಗ ಎನ್ನುವ ಕುರಿತು ಅರ್ಜುನ್ ಕಪೂರ್ ಸುಳಿವು ನೀಡಿದ್ದಾರೆ.
ಲೈವ್ ವಿಡಿಯೋ ಚಾಟ್ ನಲ್ಲಿ ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗಿ ಎಂದು ಅವರು ಹೇಳಿದ್ದು, ಅಭಿಮಾನಿಯೊಬ್ಬ ಮದುವೆ ಯಾವಾಗ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಅರ್ಜುನ್, ಲಾಕ್ ಡೌನ್ ವೇಳೆಯಲ್ಲಿ ಮದುವೆಯಾಗಲು ಹೇಗೆ ಸಾಧ್ಯ ಎಂದು ಮರುಪ್ರಶ್ನೆ ಹಾಕಿದ್ದು, ಲಾಕ್ಡೌನ್ ಸಂಕಷ್ಟ ಬಗೆಹರಿದ ಬಳಿಕ ಮದುವೆಯಾಗುವುದು ಖಚಿತವೆಂದು ಹೇಳಿದ್ದಾರೆ.
ಮಲೈಕಾ ಮತ್ತು ಅರ್ಜುನ್ ಕಪೂರ್ ಮದುವೆಗೆ ಕಪೂರ್ ಕುಟುಂಬ ಒಪ್ಪಿಗೆ ಸೂಚಿಸಿದ್ದು ಮಲೈಕಾ ಮತ್ತು ಅರ್ಜುನ್ ದೇಶ-ವಿದೇಶಗಳಲ್ಲಿ ಸುತ್ತಾಡತೊಡಗಿದ್ದಾರೆ. 46 ವರ್ಷದ ಮಲೈಕಾ ತನಗಿಂತ ಕಿರಿಯ ಅರ್ಜುನ್ ಜೊತೆಗೆ ಎರಡು ವರ್ಷಗಳಿಂದ ಡೇಟಿಂಗ್ ನಲ್ಲಿದ್ದಾರೆ.
1998 ರಲ್ಲಿ ಅರ್ಬಾಜ್ ಖಾನ್ ಮತ್ತು ಮಲೈಕಾ ಅರೋರ ಮದುವೆಯಾಗಿದ್ದು ಭಿನ್ನಾಭಿಪ್ರಾಯಗಳ ಬಳಿಕ 2017 ರಲ್ಲಿ ಫ್ಯಾಮಿಲಿ ಕೋರ್ಟ್ ನಲ್ಲಿ ವಿಚ್ಛೇದನ ಪಡೆದುಕೊಂಡಿದ್ದಾರೆ. ಅವರಿಗೆ ಅರ್ಹಾನ್ ಎಂಬ ಪುತ್ರನಿದ್ದಾನೆ. ಅರ್ಬಾಜ್ ಖಾನ್ ಇಟಾಲಿಯನ್ ಮಾಡೆಲ್ ಜೊತೆಗೆ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ.